ದೊಡ್ಡಬಳ್ಳಾಪುರ, (ಸೆ.17); ಮನೆ ಮೇಲೆ ಅಳವಡಿಸಿದ್ದ ಟ್ಯಾಂಕ್ ನೀರಿನ್ನು ತಿಳಿಯುವ ಸಲವಾಗಿ ಮನೆ ಏರಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದು ಸಾವನಪ್ಪಿರುವ ಘಟನೆ ನಗರದ ಕುಚ್ಚಪ್ಪನ ಪೇಟೆಯಲ್ಲಿ ಸಂಭವಿಸಿದೆ.
ಮೃತ ದುರ್ದೈವಿಯನ್ನು 57 ವರ್ಷದ ರವಿ ಎಂದು ಗುರುತಿಸಲಾಗಿದೆ.
ಮೃತನು ಇಂದು ಬೆಳಗ್ಗೆ ನೀರಿನ ಟ್ಯಾಂಕ್ ನಲ್ಲಿನ ನೀರನ್ನು ನೋಡುವ ಸಲುವಾಗಿ, ಏಣಿ ಬಳಸಿ ಮೇಲೇರಿದ್ದು, ಈ ವೇಳೆ ಏಣಿ ಜಾರಿದ ಪರಿಣಾಮ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ರವಿ ಅವರ ತಲೆಗೆ ಗಂಭೀರ ಪೆಟ್ಟಾಗಿದ್ದು, ಸಮೀಪದಲ್ಲೇ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–