ದಾಬಸ್‌ಪೇಟೆ, (ಸೆ.17); ಸೋಂಪುರ ಹೋಬಳಿಯ ನಿಡವಂದ ಗ್ರಾಮದಲ್ಲಿ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಗುಡ್ಯಾಳ ಗ್ರಾಮದ ಯುವಕ ಪರುಶುರಾಮ್ (23) ಮೃತಪಟ್ಟವರು. ಈತ ನಿಡವಂದ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಳೆದ ಎರಡು ವರ್ಷಗಳಿಂದ ಕೆ.ಪಿ.ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ವೈಡಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸೆ.15ರಂದು ರಾತ್ರಿ ಸುಮಾರು 8.30ರಲ್ಲಿ ಊಟ ಮುಗಿಸಿಕೊಂಡು ಬರುತ್ತೇನೆಂದು ರೂಮಿನಲ್ಲಿದ್ದ ಸ್ನೇಹಿತರಿಗೆ ಹೇಳಿ ಹೊರ ಹೋದವನು ಸೋಮವಾರ ಬೆಳಿಗ್ಗೆ ನಿಡವಂದ ಕುಮಾರ್‌ಮನೆ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಬೆಳಿಗ್ಗೆ ಸುತ್ತಮುತ್ತ ಹುಡುಕುವಾಗ ಶವ ಕಂಡು ಕೂಡಲೇ ಆತನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲದೆ ಪೋಲೀಸರಿಗೂ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಶವ ಪರಿಶೀಲನೆ ಮಾಡಿದರು. ಮೃತ ಯುವಕನ ಸಹೋದರ ಯಮುನಪ್ಪ ತಮ್ಮನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ದಾಬಸ್‌ಪೇಟೆ ಠಾಣೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ಪತ್ತೆಗೆ ತನಿಖಾ ಕಾರ್ಯ ಕೈಗೊಂಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….