ದೊಡ್ಡಬಳ್ಳಾಪುರ, (ಸೆ.19); ಲಾರಿ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೆಸ್ತೂರು ಗೇಟ್ ಬಳಿ ಸಂಭವಿಸಿದೆ.
ಘಟನೆಯಲ್ಲಿ ಚಾಲಕ, ವಿದ್ಯಾರ್ಥಿನಿ ಹಾಗೂ ಅನೇಕ ಪ್ರಯಾಣಿಕರಿಗೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.
ಕೆಸ್ತೂರು ಗೇಟ್ ಬಳಿ ಬಸ್ ನಿಲ್ಲಿಸಲು ಸ್ಲೋ ಮಾಡಿದ ವೇಳೆ ಏಕಾಏಕಿ ಹಿಂದಿನಿಂದ ಲಾರಿ ಗುದ್ದಿದೆ ಎನ್ನಲಾಗುತ್ತಿದ್ದು, ಲಾರಿ ಗುದ್ದಿದ ತೀವ್ರತೆಗೆ ಬಸ್ಸಿನ ಹಿಂದಿನ ಚಕ್ರ ಡಿವೈಡರ್ ಮೇಲೇರಿ ನಿಂತಿದೆ. ಅದೃಷ್ಟವಶಾತ್ ಯಾವುದೇ ದೊಡ್ಡ ಮಟ್ಟದ ತೊಂದರೆ ಉಂಟಾಗಿಲ್ಲ.
ಇದನ್ನೂ ಓದಿ; ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವಿಗಾಗಿ ಅರ್ಜಿ ಆಹ್ವಾನ
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಘಟನೆ ಸಂಭವಿಸಿದೆ.