ದೊಡ್ಡಬಳ್ಳಾಪುರ, (ಸೆ.2 6); ತಾಲೂಕಿನ ಶಿವಪುರದಲ್ಲಿರುವ ವಿದ್ಯಾದಾನ್ ಶಾಲೆಯ ವಿದ್ಯಾರ್ಥಿ ಜಿಲ್ಲಾ ಮಟ್ಟ ಚೆಸ್ ಸ್ಪರ್ಧೆಯಲ್ಲಿ (chess tournament) ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿದ್ಯಾದಾನ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮನೀಶ್ ಗೌಡ ಭಾಗವಹಿಸಿ, ಜಯಶೀಲರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆಯಾದ ಮನೀಶ್ ಗೌಡ ಅವರನ್ನು ವಿದ್ಯಾದಾನ್ ಶಾಲೆಯ ಮುಖ್ಯಶಿಕ್ಷಕ ಚೇತನ್ ಎನ್., ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥ್ ಸೇರಿದಂತೆ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.