ಹೈದರಾಬಾದ್: ತೆಲುಗು ಚಿತ್ರರಂಗದ ಹೆಸರಾಂತ ನಟ ಮೋಹನ್ ಬಾಬು ( Mohan babu ) ಮನೆಯಿಂದ 10 ಲಕ್ಷ ರೂ. ನಗದು ಕಳವು ಮಾಡಲಾಗಿದೆ.
ಈ ಕುರಿತು ನೀಡಲಾದ ದೂರಿನ ಮೇರೆಗೆ ಮನೆಗೆಲಸ ದವರಲ್ಲಿ ಒಬ್ಬನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ನಟ ಮೋಹನ್ ಬಾಬು ಅವರ ಕಾರ್ಯದರ್ಶಿ ಮನೆಗೆ ಬಂದಿದ್ದಾಗ ಹಣವಿದ್ದ ಬ್ಯಾಗ್ ತಂದಿದ್ದರು. ಆ ಬ್ಯಾಗ್ ಕಳುವಾಗಿದ್ದು, ಮನೆಗೆಲಸದ ವ್ಯಕ್ತಿ ಆ ಬಳಿಕ ಪರಾರಿಯಾಗಿದ್ದ ಎನ್ನಲಾಗಿದೆ.
ನೀಡಲಾದ ದೂರಿನ ಮೇರೆ ತನಿಖೆ ಆರಂಭಿಸಿದ ಪೊಲೀಸರು, ಹಣದೊಂದಿಗೆ ಪರಾರಿಯಾಗಿದ್ದ ಮನೆ ಕೆಲಸದವನನ್ನು ತಿರುಪತಿಯಲ್ಲಿ ಬಂಧಿಸಿ, 7.36 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.