ದೊಡ್ಡಬಳ್ಳಾಪುರ; ನಗರದ ಪ್ರಸಿದ್ಧ ಬಯಲು ಬಸವಣ್ಣ ದೇವಾಲಯದಲ್ಲಿ ಕಳ್ಳತನ ನಡೆಸುವ ವಿಫಲಯತ್ನ ನಡೆದಿರುವ ಕುರಿತು ವರದಿಯಾಗಿದೆ.
ದೊಡ್ಡಬಳ್ಳಾಪುರದ ಇತಿಹಾಸ ಪ್ರಸಿದ್ಧ ದೇವಾಲಯವಾಗಿರುವ ಬಯಲು ಬಸವಣ್ಣ ಶಿವ ಪಾರ್ವತಿ ದೇವಸ್ಥಾನದ ಕಿಟಕಿ ಸರಳುಗಳನ್ನು ಕಿತ್ತಿರುವ ಕಳ್ಳರು ಕಳ್ಳತನ ನಡೆಸಲು ಯತ್ನಿಸಿದ್ದಾರೆ. ಆದರೆ ಕಳವು ಯತ್ನ ಫಲಕಾರಿಯಾಗದೆ ಹಿಂತಿರುಗಿದ್ದಾರೆಂದು ಮೂಲಗಳು ತಿಳಿಸಿವೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.