ದೊಡ್ಡಬಳ್ಳಾಪುರ; ಮಹಾಲಯ ಅಮಾವಾಸ್ಯೆ ದಿನವೇ ದೊಡ್ಡಬಳ್ಳಾಪುರದಲ್ಲಿ ಭೀಕರ ಅಪಘಾತ (Accident News update) ಸಂಭವಿಸಿ, ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾವಾಸಾಕಿ ನಿಂಜಾ ಹಾಗೂ ಬುಲೆಟ್ ನಡುವೆ ಅಪಘಾತ ಸಂಭವಿಸಿದ್ದು, ಬುಲೆಟ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬುಲೆಟ್ ಸವಾರ ಸಿದ್ದೇನಾಯಕನಹಳ್ಳಿ ನಿವಾಸಿ ವಿಜಯ್ (18 ವರ್ಷ) ಸಿದ್ದೇನಾಯಕನಹಳ್ಳಿ ವೃತ್ತದ ಬಳಿ ತಿರುವ ಪಡೆಯುವ ಸಂದರ್ಭದಲ್ಲಿ ಯಲಹಂಕ ಕಡೆಯಿಂದ ವೇಗವಾಗಿ ಬಂದ ನಿಂಜಾ ಬೈಕಿ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಸಿದ್ದಾರೆ.
ಘಟನೆಯಲ್ಲಿ ಬುಲೆಟ್ ಬೈಕ್ ಪೀಸ್ ಪೀಸ್ ಆಗಿದ್ದರೆ, ನಿಂಜಾ ಬೈಕ್ ಜಖಂ ಗೊಂಡಿದೆ.
ಗಂಭೀರವಾಗಿ ಗಾಯಗೊಂಡ ಬುಲೆಟ್ ಸವಾರ ವಿಜಯ್ ಅವರಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

ನಿಂಜಾ ಬೈಕ್ ಸವಾರ ರಘುನಾಥಪುರ ನಿವಾಸಿ ಉವೇಜ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.