ದೊಡ್ಡಬಳ್ಳಾಪುರ: ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಂಜೂರು ಬಳಿ ಸಂಭವಿಸಿದೆ.
ಊಟಕ್ಕೆಂದು ಗುಂಜೂರಿನ ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿದ್ದ ವೇಳೆ, ತೊಂಡೇಬಾವಿ ಕಡೆಯಿಂದ ಬಂದ ಪ್ಯಾಸೆಂಜರ್ ಆಟೋ ಏಕಾಏಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಟೋ ಚಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೃತ ಆಟೋ ಚಾಲಕನನ್ನು ಗೌರಿಬಿದನೂರು ತಾಲೂಕಿನ ಬಚ್ಚರೆಡ್ಡಿಹಳ್ಳಿ ಗ್ರಾಮದ 32 ವರ್ಷದ ಮಹೇಶ್ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.