ನವದೆಹಲಿ; ಉತ್ತರ ಪ್ರದೇಶದ ಆಗ್ರಾ ಬಳಿ ಮಿಗ್-29 ಯುದ್ಧ ವಿಮಾನವು ಪತನಗೊಂಡ ಘಟನೆ ಇಂದು ನಡೆದಿದ್ದು, Video ವೈರಲ್ ಆಗಿದೆ.
ಘಟನೆಯಲ್ಲಿ ಪೈಲೆಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುದ್ಧ ವಿಮಾನವು ಪ್ರತಿ ನಿತ್ತದಂತೆ ಅಭ್ಯಾಸಕ್ಕೆಂದು ಪಂಜಾಬ್‌ನ ಆದಂಪುರದಿಂದ ಬೇಸ್‌ನಿಂದ ಟೇಕಾಫ್ ಆಗಿದ್ದು, ಆಗ್ರಾಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಘಟನೆ ಸದ್ಯ ನಿಖರ ಕಾರಣ ತಿಳಿದುಬಂದಿಲ್ಲ.
#आगरा के पास एयरफोर्स का Mig-29 लड़ाकू विमान क्रैश हुआ है
— Narendra Pratap (@hindipatrakar) November 4, 2024
पायलट ने इंजेक्ट होकर किसी तरह अपनी जान बचाई है. पायलट को अस्पताल में भर्ती कराया गया है.
यह विमान पंजाब के आदमपुर से रूटीन उड़ान पर था. खराबी आने पर पायलट ने सूझबूझ दिखाई और विमान को खेत में गिरा दिया pic.twitter.com/wY9Os5funF
ಪೈಲೆಟ್ ಮುಂಜಾಗ್ರತೆ ವಹಿಸಿದ ಕಾರಣ ಜನನಿಬಿಡ ಪ್ರದೇಶವಲ್ಲದೆ, ಹೊಲವೊಂದರಲ್ಲಿ ವಿಮಾನ ಪತನಗೊಂಡಿದ್ದು, ದೊಡ್ಡಮಟ್ಟದ ದುರಂತ ತಪ್ಪಿದೆ.
ವಿಮಾನವು ಧಗ-ಧಗ ಹೊತ್ತಿ ಉರಿದಿದ್ದು, ಸ್ಥಳೀಯರು ಕಿಕ್ಕಿರಿದು ಸೇರಿದ್ದರು. ಅಲ್ಲದೆ ಮೊಬೈಲ್ ಗಳಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ Video ವೈರಲ್ ಮಾಡಲಾಗಿದೆ.
ಘಟನೆ ಸಂಬಂಧ ರಕ್ಷಣಾ ಇಲಾಖೆಯು ತನಿಖೆಗೆ ಆದೇಶಿಸಿದೆ.