ನವದೆಹಲಿ: ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಆಡ್ವಾಣಿ ಅವರಿಗೆ ಇಂದು ಜನ್ಮದಿನದ ಸಂಭ್ರಮ.
ಹಿರಿಯ ರಾಜಕೀಯ ಮುತ್ಸದ್ದಿ ಅಡ್ವಾನಿ ಅವರ ಹುಟ್ಟುಹಬ್ಬಕ್ಕೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಹಿರಿಯ ನಾಯಕನಿಗೆ ಶುಭಾಷಯ ಕೋರಿದ್ದಾರೆ.
ಈ ಕುರಿತು ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿರುವ ಮೋದಿ, ಅಡ್ವಾಣಿಗೆ ಹುಟ್ಟುಹಬ್ಬದ ಶುಭಾಶಯ ಎಂದಿದ್ದಾರೆ. ಅಲ್ಲದೆ, ಈ ವರ್ಷ ಅಡ್ವಾಣಿಗೆ ಭಾರತ ರತ್ನ ಸಿಕ್ಕಿರೋದ್ರಿಂದ ಹುಟ್ಟುಹಬ್ಬ ಮತ್ತಷ್ಟು ಮೌಲ್ಯಯುತವಾಗಿದೆ.
ಭಾರತಕ್ಕೆ ಆಡ್ವಾಣಿ ಕೊಡುಗೆ ಅಪಾರವಾಗಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಲಾಲ್ ಕೃಷ್ಣ ಆಡ್ವಾಣಿ. ತಮ್ಮನ್ನ ತಾವು ಸಮರ್ಪಣೆ ಮಾಡಿಕೊಂಡಿದ್ದಾರೆ ಎಂದು ಕೊಂಡಾಡಿದ್ದಾರೆ.
ಭಾರತದ ಉಜ್ವಲ ಭವಿಷ್ಯಕ್ಕೆ ಅನೇಕ ದೂರದೃಷ್ಟಿಯ ಕೊಡುಗೆಗಳನ್ನ ಆಡ್ವಾಣಿ ನೀಡಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.
ಇಂತಹ ಮಹಾನ್ ವ್ಯಕ್ತಿಯಿಂದ ಅನೇಕ ವರ್ಷಗಳ ಕಾಲ ಸಲಹೆ ಪಡೆದಿದ್ದೇನೆ. ಇವರ ಒಡನಾಟವೇ ಅದ್ಭುತ ಇದು ನನಗೆ ನಿಜಕ್ಕೂ ಅದೃಷ್ಟದ ವಿಚಾರವಾಗಿದೆ. ಆಡ್ವಾಣಿಗೆ ಆ ದೇವರು ಸುಖ, ಶಾಂತಿ ಹಾಗೂ ಆರೋಗ್ಯ ನೀಡಲಿ ಎಂದು ಬರೆದುಕೊಂಡಿದ್ದಾರೆ.