ಚೆನ್ನೈ: ಅನುಮತಿ ಇಲ್ಲದೆ ದೃಶ್ಯವನ್ನು ಬಳಿಸಿಕೊಳ್ಳಲಾಗಿದೆ ಎಂದು ಹತ್ತು ಕೋಟಿ ರೂ.ನೀಡುವಂತೆ ನಟ ಧನುಶ್ ಅವರು ನಟಿ ನಯನತಾರಾ (nayanthara) ಹಾಗೂ ನೆಟ್ ಫಿಕ್ಸ್ ಸಂಸ್ಥೆಗೆ ನೋಟೀಸ್ ನೀಡಿದ್ದಾರೆ.
ನಟ ಧನುಷ್ ಹಾಗೂ ನಯನತಾರಾ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವು ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆದರೆ ಈಗ ಇಬ್ಬರ ನಡುವೆ ಮಾತಿನ ಯುದ್ದ ಆರಂಭವಾಗಿದೆ.
ಈ ಬೆನ್ನಲ್ಲೇ ಧನುಶ್ ಅವರನ್ನು ನಯನತಾರಾ ನೀಚ ಎಂದು ಜರಿದಿದ್ದಾರೆ. ನಯನತಾರಾ ಸಿನಿಮಾ ಜರ್ನಿಯ ಕುರಿತ ನಯನತಾರಾ ಬಿಯಾಂಡ್ ದಿ ಫೇರೀಟೇಲ್ ಸಾಕ್ಷ್ಯ ಚಿತ್ರ ರಿಲಿಸ್‌ಗೆ ರೆಡಿಯಾಗಿದ್ದು, ನೆಟ್ ಪ್ಲಿಕ್ಸ್‌ನಲ್ಲಿ ಪ್ರಸಾರ ಆರಂಭಿಸಲಿದೆ.
ಈ ಡಾಕ್ಯುಮೆಂಟರಿಯ ಪ್ರೋಮೋ ಬಿಡುಗಡೆ ಆಗಿದ್ದು, ಇದರಲ್ಲಿ ಕೆಲವು ಸಿನಿಮಾಗಳ ದೃಶ್ಯಗಳು, ಚಿತ್ರೀಕರಣದ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಅದರಲ್ಲಿ ನಾನುಮ್ ರೌಡಿ ದಾನ್ ಚಿತ್ರದ ಮೂರು ಸೆಕೆಂಡ್ ದೃಶ್ಯವೂ ಇದೆ.
ಇದು ಧನುಶ್ ನಿರ್ಮಾಣದ ಸಿನಿಮಾವಾಗಿದ್ದು, ತಮ್ಮ ಅನುಮತಿ ಇಲ್ಲದೆ ದೃಶ್ಯವನ್ನು ಬಳಿಸಿಕೊಳ್ಳಲಾಗಿದೆ, ಹಾಗಾಗಿ ಹತ್ತು ಕೋಟಿ ರು.ನೀಡುವಂತೆ ಧನುಶ್, ನಯನತಾರಾ ಹಾಗೂ ನೆಟ್ ಫಿಕ್ಸ್‌ಗೆ ನೋಟೀಸ್ ನೀಡಿದ್ದರು.
ಧನುಶ್ ಕಳಿಸಿರುವ ನೊಟೀಸ್ ನೋಡಿ ಕೆಂಡಾಮಂಡಲರಾಗಿರುವ ನಯನ, ಧನುಶ್ ಅವರನ್ನು ನೀಚ, ದುರಹಂಕಾರಿ, ಹಣಬಾಕ ಎಂದು ನಿಂದಿಸಿದ್ದಾರೆ.
ನಾನೂಮ್ ರೌಡಿ `ದಾನ್ ಸಿನಿಮಾದ ಹಾಡು, ಕೆಲವು ವಿಡಿಯೊ ತುಣುಕನ್ನು ಬಳಸಿಕೊಳ್ಳಲು ಕಳೆದ ಎರಡು ವರ್ಷದಿಂದಲೂ ಅನುಮತಿ ಕೇಳಿದ್ದೇನೆ. ಆದರೆ ನಮ್ಮ ಮನವಿಗೆ ಸ್ಪಂದಿಸಿಲ್ಲ. ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಹಾಡು ಬಳಸುವುದನ್ನು ಕೈಬಿಟ್ಟು ಸಿನಿಮಾದ ಶೂಟಿಂಗ್ ದೃಶ್ಯವನ್ನು ಬಳಸಿಕೊಂಡಿದ್ದೇವೆ. ಅದರ ಮೂರು ಸೆಕೆಂಡ್ ಬಳಸಿಕೊಂಡಿದ್ದಕ್ಕೆ ಹತ್ತು ಕೋಟಿ ರು.ನೀಡುವಂತೆ ನೊಟೀಸ್ ಕಳಿಸಿದ್ದೀರ. ಇದು ನನಗೆ ಬೇಸರತರಿಸಿದೆ ಎಂದು ನಯನತಾರಾ ಕಿಡಿಕಾರಿದ್ದಾರೆ.
ಇದಿಷ್ಟೇ ಅಲ್ಲ, ನಾನುಮ್ ರೌಡಿ ದಾನ್ ಸಿನಿಮಾ ನಿರ್ಮಾಣ ಮಾಡುವಾಗ ಚಿತ್ರತಂಡದ ವಿರುದ್ದ ಅದೆಷ್ಟು ವಿಷಕಾರಿದಿರಿ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನೀನು ಆಡಿದ ಮಾತುಗಳು ಮನಸಿಗೆ ನೋವುಂಟು ಮಾಡಿವೆ. ಅದನ್ನು ನಾನು ಇನ್ನು ಮರೆತಿಲ್ಲ, ನನ್ನ ಮನಸಿಗೆ ಮಾಡಿದ ಗಾಯ ಇನ್ನೂ ಆರಿಲ್ಲ ಎಂದು ಖಾರವಾಗಿಯೇ ನುಡಿದಿದ್ದಾರೆ ನಯನತಾರಾ.
ಅಭಿಮಾನಿಗಳ ಮುಂದೆ ನಾಟಕೀಯವಾಗಿ ನಟಿಸುತ್ತೀಯಾ ತಾನು ಭಾರೀ ಸಾಧು ಎಂದು ಬಿಂಬಿಸಿಕೊಳ್ಳುತ್ತೀಯಾ ನೀನೆಂತ ನೀಚ ಎಂದು ಎಲ್ಲರಿಗೂ ಗೊತ್ತಾಗಲಿದೆ ಅದನ್ನು ಹೆಚ್ಚು ದಿನ ಮುಚ್ಚಿಡಲಾಗುವುದಿಲ್ಲ ಎಂದು ನಯನ ತಾರಾ ನೇರವಾಗಿಯೇ ನಿಂದಿಸಿದ್ದಾರೆ.
ನಾನುಮ್ ರೌಡಿ ದಾನ್ 2015ರಲ್ಲಿ ತೆರೆಗೆ ಬಂದಿತ್ತು. ನಯನಾತಾರ ಪತಿ ವಿಣೇಶ್ ಶಿವನ್ ನಿರ್ದೇಶಿದ್ದ ಈ ಚಿತ್ರವನ್ನು ಧನುಶ್ ನಿರ್ಮಾಣ ಮಾಡಿದ್ದರು. ವಿಜಯ್ ಸೇತುಪತಿ ಹಾಗೂ ನಯನತಾರಾ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.