ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಸಂಭ್ರಮದ ಸುವರ್ಣ ಕನ್ನಡ ರಾಜ್ಯೋತ್ಸವ| SKDVV

ಬಳ್ಳಾರಿ (SKDVV): ಶ್ರೀಮಂತ ಸಂಸ್ಕೃತಿ, ಮನಸೂರೆಗೊಳ್ಳುವ ಕಲೆ, ಭೌಗೋಳಿಕ ವಿಶೇಷತೆ ಹಾಗೂ ವೈವಿಧ್ಯತೆಯಿಂದ ಕೂಡಿದ ಕನ್ನಡ ನಾಡಿನಲ್ಲಿ ಜನಿಸುವುದೇ ಪುಣ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಜಯಕರ ಎಸ್.ಎಂ ಅವರು ಹೇಳಿದರು.

ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುವರ್ಣ ಕರ್ನಾಟಕ ಸಂಭ್ರಮ-ಕರ್ನಾಟಕ ರಾಜ್ಯೋತ್ಸವ-69 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ಪ್ರದೇಶಗಳಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗದಲ್ಲಿ ಪ್ರಾದೇಶಿಕವಾರು ಮಾತನಾಡುವ ಭಾಷೆ ಶೈಲಿ, ಆಚಾರ-ವಿಚಾರ, ಉಡುಗೆ-ತೊಡುಗೆ ಬದಲಾವಣೆಗೊಳ್ಳುತ್ತದೆ. ಎಲ್ಲೇ ಇದ್ದರೂ ನಾವಾಡೋ ಮಾತು, ಉಸಿರಾಡೋ ಗಾಳಿ, ನಮ್ಮ ನಡೆ-ನುಡಿಯಲ್ಲೂ ಕನ್ನಡತವನ್ನು ಮೈಗೂಡಿಸಿಕೊಂಡು ವೈವಿಧ್ಯತೆಯಲ್ಲೂ ಏಕತೆಯನ್ನು ಎತ್ತಿಹಿಡಿಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಉದಯಗೊಂಡು 69 ವರ್ಷ ಕಳೆಯಿತು. ಈ ಮೊದಲು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿದ್ದ ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ಮರು ನಾಮಕರಣ ಮಾಡಿದ 50 ವರ್ಷದ ಸಂಭ್ರಮದಲ್ಲಿ ನಾವಿದ್ದೇವೆ ಎಂದರು.

ಕನ್ನಡ ನಾಡಿನ ಜನರು ಇತರೆ ಭಾಗಗಳಿಗೆ ಹೋದರೂ ಕನ್ನಡವನ್ನು ಸಂಭ್ರಮಿಸುವ ಗುಣ ಹೊಂದಿದ್ದಾರೆ. ಐತಿಹಾಸಿಕ ಹಿನ್ನೆಲೆ ಹೊಂದಿದ ಕನ್ನಡ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಕನ್ನಡಾಭಿಮಾನಿಗಳು ಶ್ರಮಿಸಬೇಕು ಎಂದು ತಿಳಿಸಿದರು.

ನಾಡಿನ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರು ಮಾತನಾಡಿ, ಕನ್ನಡ ಭಾಷೆಗೆ ಅವಿರತ ಇತಿಹಾಸವಿದೆ. ಅನೇಕ ಶಾಸನ, ಸಾಹಿತ್ಯ, ವಚನ, ಕೃತಿ, ಲೇಖನಗಳನ್ನು ಕೊಡುಗೆ ನೀಡುವಲ್ಲಿ ಕನ್ನಡ ಮೇರುಸ್ಥಾನ ಹೊಂದಿದ್ದು, ಕನ್ನಡದ ಇತಿಹಾಸವನ್ನು ಅರಿತು ಗೌರವಿಸಬೇಕು ಎಂದು ಹೇಳಿದರು.

ವೈವಿಧ್ಯಮಯ ನಾಡು, ಸರ್ವ ಜನಾಂಗದ ಶಾಂತಿಯ ತೋಟವಾದ ಕನ್ನಡ ನಾಡಿನಲ್ಲಿ ಜಾತಿ-ಧರ್ಮದ ಎಲ್ಲೆ ಮೀರಿ ಜೀವಿಸಲಾಗುತ್ತಿದ್ದು, ಕನ್ನಡಿಗರು ಪರಿಷ್ಕೃತ ಗುಣ ಬೆಳೆಸಿಕೊಳ್ಳಬೇಕು ಎಂದರು.

ಕನ್ನಡವನ್ನು ಕಟ್ಟಿ ಬೆಳೆಸಲು ಶ್ರಮಿಸಿದ ಆದಿಕವಿ ಪಂಪ, ಕುಮಾರವ್ಯಾಸ, ಬಸವಣ್ಣ, ಅಲ್ಲಮಪ್ರಭು, ಪುರಂದರ ದಾಸ, ಕನಕದಾಸ, ಕುವೆಂಪು, ದ.ರಾ.ಬೇಂದ್ರೆ, ಸೇರಿದಂತೆ ಕನ್ನಡ ಭಾಷೆ-ಸಾಹಿತ್ಯ ಏಳಿಗೆಗೆ ಕೊಡುಗೆ ನೀಡಿದ ಅನೇಕ ಮಹನೀಯರನ್ನು ಸ್ಮರಿಸಬೇಕಿರುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದು ಹೇಳಿದರು.

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ಪ್ರತಿ ವಿದ್ಯಾರ್ಥಿಯು ಸಂಸ್ಕಾರ ಹೊಂದಿರುತ್ತಾರೆ. ವಿವಿಯಲ್ಲಿ ಶೀಘ್ರವೇ ಕನ್ನಡ ಅಧ್ಯಯನ ವಿಭಾಗಕ್ಕೆ ಪೂರ್ಣಕಾಲಿಕ ಅಧ್ಯಾಪಕರುಗಳ ನೇಮಕಕ್ಕೆ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಕೆ.ರವಿ ಅವರು ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಉದಯಿಸಿರುವ ಈ ಭಾಗ ಪವಿತ್ರ ಭೂಮಿಯಾಗಿದ್ದು, ಕಲೆ, ಸಾಹಿತ್ಯ, ಸಮಾಜಕ್ಕೆ ಅಪಾರ ಕೊಡುಗೆ ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಯುವ ಪೀಳಿಗೆಯು ಹೆಚ್ಚಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ತಪ್ಪು ಪ್ರಯೋಗವಾದಲ್ಲಿ ಧ್ವನಿ ಎತ್ತುವ ಕೆಲಸ ನಿರ್ವಹಿಸಿ, ಕನ್ನಡ ಭಾಷೆ-ಸಾಹಿತ್ಯ ಬಲಿಷ್ಠಗೊಳಿಸುವ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಕನ್ನಡ ಭಾಷೆ, ಸಾಹಿತ್ಯ, ಜಾನಪದ ಸೊಗಡಿನ ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಕನ್ನಡ ಕೀಳರಿಮೆ ಭಾವನೆ ತ್ಯಜಿಸಿ ಸಮ ಸಮಾಜದ ಚಿಂತನೆ ಬೆಳೆಸಿಕೊಂಡು, ಕನ್ನಡತನವನ್ನು ಉಳಿಸಿ-ಬೆಳೆಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಗಣ್ಯರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಗೀತಾ ತಂಡದ ಗೀತೆಗಳು ಕನ್ನಡಾಭಿಮಾನಿಗಳಿಗೆ ಇಂಪು ನೀಡಿತು.

ಸಂಭ್ರಮ-ಸಡಗರದ ಮೆರವಣಿಗೆ

ಸುವರ್ಣ ಕರ್ನಾಟಕ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ-69 ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಅದ್ದೂರಿ ಮೆರವಣಿಗೆಯು ತಾಯಿ ಭುವನೇಶ್ವರಿಯ ರಥದೊಂದಿಗೆ ಕುಂಭ ಹೊತ್ತ ಮಹಿಳೆಯ ಸಮ್ಮುಖದಲ್ಲಿ ವಿವಿಧ ಕಲಾತಂಡಗಳ ವಾದ್ಯಗಳ ಮೂಲಕ ರಾಜ್ಯದ 31 ಜಿಲ್ಲೆಗಳ ಸಂಸ್ಕೃತಿ, ವಿಶೇಷತೆ ಒಳಗೊಂಡ ಮಾಹಿತಿ ಕೈಪಿಡಿಯ ಚಿತ್ರಣ ಹಿಡಿದು, ಬುಲೆಟ್ ಬೈಕ್‌ಗಳ ಕಲರವದಿಂದ ವಿವಿಯ ಆವರಣದಲ್ಲಿ ಸಾಗಿಬಂದ ಮೆರವಣಿಗೆಯು ಸಂಭ್ರಮ-ಸಡಗರಕ್ಕೆ ಸಾಕ್ಷಿಯಾಯಿತು. ವಿವಿಧ ಕಲಾ ತಂಡಗಳಿಂದ ಜಾನಪದ ಕಲೆಗಳ ಪ್ರದರ್ಶನಕ್ಕೆ ಮೆರವಣಿಗೆಯು ಮೆರಗು ತಂದಿತು.

ಈ ಸಂದರ್ಭದಲ್ಲಿ ವಿವಿಯ ಕುಲಪತಿಗಳಾದ ಪ್ರೊ.ಎಂ.ಮುನಿರಾಜು, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ, ಬಳ್ಳಾರಿಯ ಲೋಹಿಯಾ ಪ್ರಕಾಶನದ ಪ್ರಕಾಶಕ ಸಿ.ಚನ್ನಬಸವಣ್ಣ, ಕುಲಸಚಿವರಾದ ಎಸ್.ಎನ್ ರುದ್ರೇಶ್, ಮೌಲ್ಯಮಾಪನ ಕುಲಸಚಿವರಾದ ಪ್ರೊ.ರಮೇಶ್ ಓಲೇಕಾರ್, ಹಣಕಾಸು ಅಧಿಕಾರಿಗಳಾದ ನಾಗರಾಜ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಬರ್ಟ್ ಜೋಸ್, ಸಿಂಡಿಕೇಟ್ ಸದಸ್ಯರಾದ ಪೀರ್ ಬಾಷಾ, ಶಿವಕುಮಾರ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿಭಾಗದ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ವರ್ಗ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ರಾಜಕೀಯ

ಜನರ ನಡುವೆ ಬೆಂಕಿ ಹಚ್ಚುವುದು, ಒಡಕು ತರುವುದೇ ಕಾಂಗ್ರೆಸ್‌ನ ಬ್ರ್ಯಾಂಡ್‌: ಆರ್‌.ಅಶೋಕ (RAshoka)

ಜನರ ನಡುವೆ ಬೆಂಕಿ ಹಚ್ಚುವುದು, ಒಡಕು ತರುವುದೇ ಕಾಂಗ್ರೆಸ್‌ನ ಬ್ರ್ಯಾಂಡ್‌: ಆರ್‌.ಅಶೋಕ (RAshoka)

ರಾಜ್ಯದಲ್ಲಿ ಮುಂದೆ ಗೆಲುವು ಸಾಧಿಸಲು ಬಿಜೆಪಿ ಸದಸ್ಯತ್ವ ಅಭಿಯಾನ ಮುಖ್ಯ ಪಾತ್ರ ವಹಿಸಲಿದೆ RAshoka

[ccc_my_favorite_select_button post_id="97751"]
Cyclonefengal: ಪ್ರವಾಹದ ರಭಸಕ್ಕೆ ಕೊಚ್ಚಿಹೋದ ಬಸ್ಸುಗಳು..! Video ನೋಡಿ

Cyclonefengal: ಪ್ರವಾಹದ ರಭಸಕ್ಕೆ ಕೊಚ್ಚಿಹೋದ ಬಸ್ಸುಗಳು..! Video ನೋಡಿ

ತೀವ್ರ ಮಳೆಯಿಂದಾಗಿ ಉಂಟಾದ ಪ್ರವಾಹದ ರಭಸಕ್ಕೆ ಬಸ್ಸು ಕಾರು ಸೇರಿದಂತೆ ಹಲವಾರು ವಾಹನಗಳು ರಸ್ತೆಯಿಂದ ತಗ್ಗು ಪ್ರದೇಶಗಳಿಗೆ ಕೊಚ್ಚಿಕೊಂಡು ಹೋಗಿದೆ. Cyclonefengal

[ccc_my_favorite_select_button post_id="97715"]

ಫೆಂಗಲ್ ಚಂಡಮಾರುತ.. ಭಾರೀ ಮಳೆ| FengalCyclone

[ccc_my_favorite_select_button post_id="97326"]

ದೇಶದಲ್ಲಿ ಮೌಲ್ಯಗಳ ಕುಸಿತ: ಸಂತೋಷ್ ಹೆಗ್ಡೆ ಕಳವಳ|

[ccc_my_favorite_select_button post_id="97279"]

happy international men’s day 2024

[ccc_my_favorite_select_button post_id="96756"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ| Cmsiddaramaiah

ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ|

ಇಂಥಾದ್ದಕ್ಕೆಲ್ಲಾ ಹೆದರಿದ್ದರೆ ರಾಜಕಾರಣದಲ್ಲಿ ಉಳಿಯೋಕೆ ಆಗ್ತಿರಲಿಲ್ಲ. ಯಾವ ತಪ್ಪು ಮಾಡದ ನಾನು ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ Cmsiddaramaiah

[ccc_my_favorite_select_button post_id="97644"]
ನಡೆದಾಡುವ ದೇವರು ಶಿವಕುಮಾರ ಶ್ರೀಗಳ ಪುತ್ಥಳಿ ವಿರೂಪ.. ವ್ಯಾಪಕ ಆಕ್ರೋಶ| Shivakumara Swami

ನಡೆದಾಡುವ ದೇವರು ಶಿವಕುಮಾರ ಶ್ರೀಗಳ ಪುತ್ಥಳಿ ವಿರೂಪ.. ವ್ಯಾಪಕ ಆಕ್ರೋಶ| Shivakumara Swami

ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿರುವ ಶ್ರೀಗಳಿಗೆ ಅಪಚಾರವೆಸಗಿರುವುದು ದಿಗ್ಬ್ರಮೆ ತರುವ ವಿಷಯ Shivakumara Swami

[ccc_my_favorite_select_button post_id="97745"]
Accident| Doddaballapura: ಮೊಗಚಿ ಬಿದ್ದ ಟ್ರಕ್..!

Accident| Doddaballapura: ಮೊಗಚಿ ಬಿದ್ದ ಟ್ರಕ್..!

ಮಂಗಳವಾರ ಬೆಳಗ್ಗಿನ ಜಾವ ಘಟನೆ ನಡೆದಿದ್ದು, ದೊಡ್ಡಬಳ್ಳಾಪುರ ಮಾರ್ಗವಾಗಿ accident

[ccc_my_favorite_select_button post_id="97709"]

Accident: ಬಸ್ ಹರಿದು ದಂಪತಿ ಸ್ಥಳದಲ್ಲೇ ಸಾವು

[ccc_my_favorite_select_button post_id="97337"]

Accident: ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ

[ccc_my_favorite_select_button post_id="97314"]

Accident: ಕಡಲೆ ಕಾಯಿ ಪರಿಷೆಗೆ ತೆರಳಿದ್ದ ಮಗು

[ccc_my_favorite_select_button post_id="97187"]

ಆರೋಗ್ಯ

ಸಿನಿಮಾ

Darshan ಪ್ರಕರಣ: ಕೊಲ್ಲುವ ಉದ್ದೇಶವಿದ್ದರೆ ಊಟ, ನೀರು ತಂದುಕೊಡಿ, ಪೊಲೀಸರಿಗೆ ಒಪ್ಪಿಸಿ ಎನ್ನಲು ಸಾಧ್ಯವೇ..?;  ನ್ಯಾಯವಾದಿ ಸಿವಿ ನಾಗೇಶ್ ಪ್ರಬಲ ವಾದ

Darshan ಪ್ರಕರಣ: ಕೊಲ್ಲುವ ಉದ್ದೇಶವಿದ್ದರೆ ಊಟ, ನೀರು ತಂದುಕೊಡಿ, ಪೊಲೀಸರಿಗೆ ಒಪ್ಪಿಸಿ ಎನ್ನಲು

ಸಾಕ್ಷಿಯ ಫೋಟೋದಲ್ಲಿರುವ ಪ್ಯಾಂಟ್, ಅವರು ತೋರಿಸಿರುವ ಪ್ಯಾಂಟ್ ಬೇರೆ ಇದೆ. ಪ್ಯಾಂಟನ್ನೇ ಪೊಲೀಸರು ಬದಲಾಯಿಸಿದ್ದಾರೆ. Darshan

[ccc_my_favorite_select_button post_id="97390"]

pushpa 2 ಟ್ರೇಲರ್ ಬಿಡುಗಡೆ; ಹೇಗಿದೆ ನೋಡಿ

[ccc_my_favorite_select_button post_id="96641"]

nayanthara-ಧನುಶ್ ಜಗಳ ಜೋರು..!

[ccc_my_favorite_select_button post_id="96590"]

ದರ್ಶನ್‌ರನ್ನ ಮತ್ತೆ ಜೈಲಿಗೆ ಕಳಿಸಲು ಪೊಲೀಸರ ಸಿದ್ದತೆ..!

[ccc_my_favorite_select_button post_id="96441"]
error: Content is protected !!