ಚಿತ್ರದುರ್ಗ: ಪ್ರೇಮ ವಿವಾಹ ಹಿನ್ನೆಲೆಯಲ್ಲಿ ತಾಲೂಕಿನ ಕೋಣನೂರು ಗ್ರಾಮದಲ್ಲಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ಕೊಲೆಗೈಯಲಾಗಿದೆ (Murder)
40 ವರ್ಷದ ಮಂಜುನಾಥ್ ಕೊಲೆಯಾದ ವ್ಯಕ್ತಿ. ಯುವತಿ ಪೋಷಕರು ಹಾಗೂ ಸಂಬಂಧಿಕರಿಂದ ವ್ಯಕ್ತಿಯ ಹತ್ಯೆಯಾಗಿದೆ ಎಂದು ದೂರಲಾಗಿದೆ.
ಒಂದು ತಿಂಗಳ ಹಿಂದೆಯಷ್ಟೇ ಮಂಜುನಾಥ್ ಹಾಗೂ ಗ್ರಾಮದ ಯುವತಿ ನಡುವೆ ಮದುವೆ ನಡೆದಿತ್ತು. ವಿವಾಹದ ಬಳಿಕ ರಾಜಿ ಪಂಚಾಯಿತಿ ನಡೆದು ಕೆಲ ದಿನಗಳ ಬಳಿಕ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು.
ಪೋಷಕರು ಭರವಸೆ ನೀಡಿದ ಕಾರಣ ಯುವತಿಯನ್ನು ಊರಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮಂಜುನಾಥ್ ಚಿತ್ರದುರ್ಗದ ಸಂಬಂಧಿ ಮನೆಯಲ್ಲಿ ವಾಸವಾಗಿದ್ದ.
20 ದಿನಗಳ ಬಳಿಕ ಬುಧವಾರಕ್ಕೆ ಕೋಣನೂರಿಗೆ ತೆರಳಿದಾಗ ಏಕಾಏಕಿ ಆತನ ಮನೆಯ ಎದುರೇ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.
ಮಂಜುನಾಥ್ ಮೇಲೆ ಕೋಲು, ಬಡಿಗೆ, ಸರಳಿನಿಂದ ಹಲ್ಲೆಮಾಡಿ ಹತ್ಯೆ ಮಾಡಲಾಗಿದೆ.
ಯುವತಿ ತಂದೆ ಜಗದೀಶ್, ದೊಡ್ಡಪ್ಪ ಈಶ್ವರಪ್ಪ, ಚಿಕ್ಕಪ್ಪ ನಿಂಗಪ್ಪ ದೊಡ್ಡಪ್ಪ ಬಸವರಾಜಪ್ಪ, ಪ್ರಸನ್ನ ಸೇರಿದಂತೆ ಕುಟುಂಬಸ್ಥರಿಂದ ಹಲ್ಲೆ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ