Daily story ಹಿಂದೆ ಒಬ್ಬ ವ್ಯಾಪಾರಿ ಇದ್ದನು, ಅವನ ಹತ್ತಿರ ಅವನುಗಳಿಸಿದ್ದಲ್ಲದೆ ಅವನ ಹಿರಿಯರು ಗಳಿಸಿದ ಅಪಾರ ಸಂಪತ್ತು ಇತ್ತು.
ತುಂಬಾ ಉದಾರಿಯಾಗಿದ್ದ ಆ ವ್ಯಾಪಾರಿ ಯಾವಾಗಲೂ ಅಸಹಾಯಕರಿಗೆ ಸಹಾಯ ಮಾಡುತ್ತಿದ್ದ. ಆದರೆ ಆತನ ಔದಾರ್ಯದ ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚಾಗಿದ್ದರು. ಪ್ರತಿದಿನ ಅನೇಕ ಮಿತ್ರರು ಅವನ ಮನೆಗೆ ಬಂದು ಉಂಡು ತಿಂದು ಹೋಗುತ್ತಿದ್ದರು. ಹೋಗುವಾಗ ಅವನನ್ನು ಕೊಂಡಾಡಲು ಮರೆಯುತ್ತಿರಲಿಲ್ಲ, ಅವನನ್ನು ಸಂತೋಷಪಡಿಸಿ, ತಮ್ಮ ಕೆಲಸವನ್ನು ಸಾಧಿಸಿಕೊಳ್ಳುತ್ತಿದ್ದರು. ಅವರಲ್ಲಿ ಅನೇಕರು ಸ್ವಾರ್ಥಿ ಹಾಗೂ ಆಶೆಬುರುಕರು ಇದ್ದರು.
ಆ ವ್ಯಾಪಾರಿಯು ಬಹಳ ಬುದ್ಧಿವಂತನೂ ಆಗಿದ್ದ. ಅವನು ತನ್ನ ಮಿತ್ರರ ನಿಜವಾದ ಸ್ವರೂಪ ತಿಳಿಯಲು ಕಾತರನಾಗಿದ್ದ. ಅಂತೆಯೇ ಒಂದು ದಿನ ಅವರನ್ನು ಪರೀಕ್ಷಿಸುವ ನಿಶ್ಚಯ ಮಾಡಿದೆ.
ದಿನವೂ ತನ್ನ ಬಳಿ ಬರುವ ಆ ಎಲ್ಲ ಮಿತ್ರರನ್ನೂ ಭೋಜನಕೂಟಕ್ಕೆ ಆಮಂತ್ರಿಸಿದನು. ನಿತ್ಯದಂತೆ ಈ ದಿನವೂ ತೃಪ್ತಿಯಾಗುವಂತೆ ಉಂಡು ಅವನ ಗುಣಗಾನ ಮಾಡತೊಡಗಿದರು. ಸಮಯ ಸಾಧಿಸಿ ವ್ಯಾಪಾರಿ ಕೇಳಿದ ಮಿತ್ರರೆ ನಿಮಗೊಂದು ಮಾತು ಕೇಳಬೇಕಿದೆ ದರೋಡೆಕೋರರು ನನ್ನ ಮನೆಯ ಮೇಲೆ ದಾಳಿ ಮಾಡಿ ನನ್ನನ್ನು ಕೊಂಡು ನನ್ನ ಸಂಪತ್ತನ್ನು ಅಪಹರಿಸಬೇಕೆಂದು ಹೊಂಚು ಹಾಕಿದ್ದಾರೇದು ನನಗೆ ತಿಳಿದು ಬಂದಿದೆ.
ವ್ಯಾಪಾರಿಯ ಮಾತುಗಳನ್ನು ಕೇಳುತ್ತಿದ್ದಂತೆ ಎಲ್ಲ ಮಿತ್ರರಿಗೆ ಆಶ್ಚರ್ಯವೂ. ಭಯವೂ ಆಯಿತು. ಬೆದರಿದ ಜಿಂಕೆಯಂತೆ ಅವರು ಪರಸ್ಪರ ಮುಖ ನೋಡತೊಡಗಿದರು. ಎಲ್ಲರ ಮುಖದ ಮೇಲೆ ಪ್ರಶ್ನೆಯ ಚಿಹ್ನೆ ಮೂಡಿತು.
ವ್ಯಾಪಾರಿ ಮುಂದೆ ಹೇಳತೊಡಗಿದ, ‘ಬಂಧುಗಳೇ, ನೀವೆಲ್ಲ ನನ್ನವರು. ಈ ಸನ್ನಿವೇಶದಲ್ಲಿ ನನ್ನ ಹಾಗೂ ನನ್ನ ಸಂಪತ್ತಿನ ರಕ್ಷಣೆಯ ಭಾರ ನಿಮ್ಮದು. ನೀವೆಲ್ಲರೂ ಜವಾಬ್ದಾರಿಯನ್ನು ನಿರ್ವಹಿಸುವಿರೆಂದು ನಾನು ನಂಬಿದ್ದೇನೆ. ಇಂದು ರಾತ್ರಿ ನೀವೆಲ್ಲ ಇಲ್ಲಿಗೆ ಬನ್ನಿ. ನಾವೆಲ್ಲರೂ ಒಟ್ಟಿಗೆ ಸೇರಿ ಆ ದರೋಡೆಕೋರರನ್ನು ಹಿಡಿಯೋಣೆ.
ಈ ಮಾತನ್ನು ಕೇಳಿ ‘ಅವಶ್ಯವಾಗಿ ಬರುತ್ತೇವೆ. ನಿಮ್ಮ ಹಾಗೂ ನಿಮ್ಮ ಸಂಪತ್ತಿನ ರಕ್ಷಣೆ ಮಾಡಲು ಅವಶ್ಯಕವಾಗಿ ಬರುತ್ತೇವೆ ಎಂದರು.
ರಾತ್ರಿಯಾಯಿತು. ಆದರೆ ನೂರಾರು ಮಿತ್ರರಲ್ಲಿ ಕೇವಲ ಇಬ್ಬರು ವ್ಯಾಪಾರಿಯ ರಕ್ಷಣೆಗೆ ಬಂದಿದ್ದರು. ಇದರಿಂದ ಈ ವ್ಯಾಪಾರಿ ಒಂದು ನಿರ್ಣಯಕ್ಕೆ ಬಂದ. ಇಷ್ಟು ಮಿತ್ರರಲ್ಲಿ ಇವರಿಬ್ಬರೇ ನಿಜವಾದ ಮಿತ್ರರು. ಉಳಿದವರು ಸ್ವಾರ್ಥಿಗಳು, ಸಮಯ ಸಾಧಕರು ಎಂದು ವ್ಯಾಪಾರಿಗೆ ಮನದಟ್ಟಾಯಿತು.
ಗೆಳೆತನದ ಪರೀಕ್ಷೆ ನಿಜವಾಗಿ ಸಂಕಟ ಸಮಯದಲ್ಲಿ ಆಗುತ್ತದೆ ಎಂದು ತಿಳಿದುಕೊಂಡಿದ್ದ ಆ ಜಾಣ ವ್ಯಾಪಾರಿ.
ಕೃಪೆ: ಸಾಮಾಜಿಕ ಜಾಲತಾಣ. (ಲೇಖಕರ ಮಾಹಿತಿ ಲಭ್ಯವಿಲ್ಲ)