ಬೆಂಗಳೂರು: ಬಿಜೆಪಿಯಲ್ಲಿನ (BJP) ಯತ್ನಾಳ್ ಹಾಗೂ ವಿಜಯೇಂದ್ರ ಬಣಗಳ ಮಾತಿನ ಸಮರ ದಿನದಿಂದ ದಿನಕ್ಕೆ ತೀವ್ರಗೊಂಡಿದೆ.
ಯತ್ನಾಳ್ ಬಣದ ಕುರಿತು ಬೇಕಾಬಿಟ್ಟಿ ಮಾತನಾಡಿದ್ದ ಮಾಜಿ ಶಾಸಕ ರೇಣುಕಾಚಾರ್ಯ ಕುರಿತು ಸೋತವರು, ತಿರಸ್ಕಾರವಾದಂತಹ ಅಪ್ರಸ್ತುತ ನಾಯಕರ ಕುರಿತಾಗಿ ತಾನು ಮಾತನಾಡಲ್ಲ ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಯತ್ನಾಳ್ & ಟೀಂ ವಿರುದ್ಧ ಚರ್ಚಿಸಲು ಇಂದು ಮಾಜಿ ಸಿಎಂ ಬಿಎಸ್‌ವೈ ಅವರ ನಿವಾಸದಲ್ಲಿ ನಡೆದ ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ನೋಡಪಾ ನೀನು ಪ್ರತಾಪ್ ಸಿಂಹ ಅಲ್ಲ. ಪೇಪರ್ ತಿಮ್ಮ ಎಂದು ಲೇವಡಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನಿನಗೆ ಟಿಕೆಟ್ ಕೊಡಬಾರದೆಂದು ಪತ್ರ ಬರೆದಿದ್ಯಾರು ಅಂತಾ ನನಗೆ ಗೊತ್ತಿದೆ. ನಾನು ಸೋತಿರಬಹುದು. ಆದರೆ ಜನ ಇನ್ನೂ ನನ್ನೊಂದಿಗೆ ಪ್ರೀತಿ-ವಿಶ್ವಾಸದಿಂದ ಇದ್ದಾರೆ. ನಮ್ಮದೇ ಆದ ಸಾಮರ್ಥ್ಯ-ಸಂಘಟನೆ ಇದೆ. ಒಳ ಮೀಸಲಾತಿ.. ಇನ್ನಿತರೆ ನಮ್ಮ-ನಮ್ಮ ತಪ್ಪುಗಳಿಂದ ಸೋತಿದ್ದೇವೆ.
ಜನ ನಮ್ಮನ್ನು ತಿರಸ್ಕಾರ ಮಾಡಿಲ್ಲ. ನೀನು ಪೇಪರ್ ತಿಮ್ಮ ಅಷ್ಟೇ ಎಂದು ಶಾಸಕ ಯತ್ನಾಳ್ ಟೀಂ ನಲ್ಲಿ ಗುರುತಿಸಿಕೊಂಡಿರುವ ಪ್ರತಾಪ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದಾರೆ.