ಅಖಂಡ BJP ನಮ್ಮೊಂದಿಗಿದೆ.. ಅಪ್ಪಾಜಿ ಅನ್ನೋ ನನ್ಮಕ್ಕಳು ಅವರೊಂದಿಗಿದ್ದಾರೆ: ಯತ್ನಾಳ್ ಗುಡುಗು

ಬೆಂಗಳೂರು: ದಾವಣಗೆರೆ ಸಮಾವೇಶದಲ್ಲಿ ಅಖಂಡ ಬಿಜೆಪಿ ನಮ್ಮೊಂದಿಗೆ ಇರಲಿದ್ದು, ಆ ಕಡೆ ಅಪ್ಪ ಮಕ್ಕಳು ಇಬ್ಬರು ಮಾತ್ರ ಉಳಿತಾರೆ ಎಂದು ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಯಡಿಯೂರಪ್ಪ, ಬಿವೈ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದರು‌.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನಮ್ಮದು ಜನಪರ ಹೋರಾಟ.. ಅವರದು ಹೋರಾಟವಲ್ಲ, ಕುಟುಂಬ ಶಾಹಿ ಪತ್ರಿಕಾಗೋಷ್ಠಿ ಅಷ್ಟೆ.. ಈಗ ಹೇಳಿದ್ದಾರಲ್ವಾ ದಾವಣಗೆರೇಲಿ ದೊಡ್ಡ ಸಭೆ ಮಾಡ್ತಿವಿ ಅಂತೇಳಿ ಮಾಡ್ಲಿ.. ಅದ್ರ ಮರುದಿನವೇ ನಮ್ಮದಿರುತ್ತೆ. ನಮ್ಮ ಶಕ್ತಿ ಪ್ರದರ್ಶನ ಮಾಡ್ತಿವ್ರೀ, ಸಮಸ್ತ ಕರ್ನಾಟಕದ ಹಿಂದೂಗಳು, ನಿಷ್ಠಾವಂತ ಕಾರ್ಯಕರ್ತರು ನಮ್ಮೊಂದಿಗಿದ್ದಾರೆ. ಅಪ್ಪಾಜಿ ಅನ್ನೋ ನನ್ಮಕ್ಕಳು ಅವರ ಜೊತೆ ಇದ್ದಾರೆ.

ನಾವಾಗೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಉದ್ದೇಶವಿಲ್ಲ, ಅವರಾಗಿಯೇ ಇಳಿಸಿಕೊಳ್ಳುತ್ತಾರೆ. ಅವರಪ್ಪನಂತೆ ಸರ್ವಾಧಿಕಾರಿ ಆಗಬೇಕು ಎಂದು ವಿಜಯೇಂದ್ರ ಬಯಸಿದ್ದಾನೆ.

ಇದು ಪ್ರಜಾಪ್ರಭುತ್ವದ ಪಕ್ಷ, ಬಿಜೆಪಿ ಇಂಟರ್ ನಲ್ ಡೆಮಾಕ್ರಸಿ ಪಾರ್ಟಿ, ಇದೇ ಯಡಿಯೂರಪ್ಪ ಡೈಲಾಗ್ ಹೊಡಿತಿದ್ದ ಮುಲಾಯಂ ಸಿಂಗ್ ಕುಟುಂಬದ ಬಗ್ಗೆ, ಲಾಲು ಪ್ರಸಾದ್ ಯಾದವ್ ಕುಟುಂಬದ ಬಗ್ಗೆ, ದೇವೇಗೌಡರ ಕುಟುಂಬದ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಕುಟುಂಬದ ಬಗ್ಗೆ ಮಾತನಾಡುತ್ತಿದ್ದ ಕುಟುಂಬ ರಾಜಕಾರಣ ಎಂದು ಮಾತಾಡ್ತಾ ಇದ್ದ.. ನಿಮತ್ರ ಅದೇನೋ ವಿಷಲ್ ಬಿಡುಗಡೆ ಮಾಡಿ.

ಯಡಿಯೂರಪ್ಪಗೆ ಎಷ್ಟು ವ್ಯಾಮೋಹ ಅಂದರೆ ದೊಡ್ಡ ಮಗ ಕೇಂದ್ರ ಮಂತ್ರಿ ಆಗಬೇಕು, ಸಣ್ಣ ಮಗ ರಾಜ್ಯದ ಅಧ್ಯಕ್ಷ ಆಗಿ, ಎಂಎಲ್ಎ ಆಗಿ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕು.. ಇನ್ನೂ ಚಿಣ್ಣಿಮಿಣ್ಣಿ ಇದ್ದಾರೆ ಮನೇಲ್ ಅವರಿಗೆಲ್ಲ ಸ್ಥಾನಮಾನ ಕೊಡಬೇಕು ಅವಾಗ ಮೇಲುಕ್ ಹೋಗ್ತಾರೆ.‌.. ಇಲ್ಲ ಮೇಲುಕ್ ಹೋಗಲ್ಲ ಕೆಳಕ್ಕೆ ಹೋಗ್ತಾರೆ, ಅವರಿಗೆ ಸ್ವರ್ಗದಲ್ಲಿ ಪ್ರವೇಶವಿಲ್ಲ ಎಂದರು.

ಹೈಕಮಾಂಡ್ ಭೇಟಿ ಬಳಿಕ ವಿಜಯೇಂದ್ರ ನಾಯಕತ್ವ ಬದಲಾವಣೆ ಕುರಿತು ಯಾವುದೇ ರೀತಿಯ ಮಾತುಕತೆ ನಡೆದಿಲ್ಲ ಎಂದಿದ್ದಾರೆ ಎಂದ ಸುದ್ದಿಗಾರ ಪ್ರಶ್ನೆಗೆ ಮತ್ತೇನ್ ಹೇಳಬೇಕಿತ್ತು ವಿಜಯೇಂದ್ರ..? ನನ್ನನ್ನು ತಗಿತಾ ಇದ್ದರೆ ಅಂತ ಅವರಪ್ಪನಂತೆ ಅಳಬೇಕಿತ್ತಾ..? ನೀವ್ ಒಳ್ಳೆ ಕಥೆ ಹೊಡಿತಾರಲ್ಲ ಎಂದು ಲೇವಡಿ ಮಾಡಿದರು.

ನೀವೆಲ್ಲ ತಿಳ್ಕೋಳ್ರಿ ಯತ್ನಾಳ್ನ ಉಚ್ಚಾಟನೆ ಮಾಡ್ತಾರೆ, ಯತ್ನಾಳ್ ಕಥೆ ಮುಗಿತು ಅಂದ್ಕೋಂಡ್ರೆ.. ಏನ್ ಆಗಲ್ಲ, ನಾ ಮತ್ತಷ್ಟು ಗಟ್ಟಿಯಾಗಿದ್ದೀನಿ.

ಯಡಿಯೂರಪ್ಪ ಕಥೆ ಮುಗಿದಿದೆ. ಯಡಿಯೂರಪ್ಪ ಏನಿದೆ.. ಲಿಂಗಾಯತರಲ್ ಏನಾದ್ರೂ ಉಳಿಸಿಕೊಂಡಿದ್ದಾರೆನು..? ಸುಮ್ಮನೆ ಹೇಳಿಕೋತಾರೆ ಲಿಂಗಾಯತರು ನನ್ನಿದ್ದಾರೆ ಎಂದು ಕೆಜಿಪಿ ಕಟ್ಟಿ ಎಷ್ಟು ಸೀಟ್ ತಂದ್ರು ಯಡಿಯೂರಪ್ಪ ಎಂದು ಯತ್ನಾಳ್ ಪ್ರಶ್ನಿಸಿದರು.

ಅಪ್ಪನ ಸಹಿಯನ್ನೇ ನಕಲಿ ಮಾಡಿದ್ದ ವಿಜಯೇಂದ್ರನಿಂದ ಡೂಪ್ಲಿಕೇಟ್ ನೋಟಿಸ್‌ ಎಂದು ಶಾಸಕ ಬಸನ ಗೌಡ ಯತ್ನಾಳ್ ಟೀಕಿಸಿದರು.

ನೋಟಿಸ್‌ಗೆ ಸರಿಯಾಗಿ ಉತ್ತರ ಕೊಡುತ್ತೇನೆ. ಈವರೆಗೂ ಮೂರು ಸಾರಿ ನೋಟಿಸ್‌ ಕೊಟ್ಟಿದ್ದರು. ಈಗಾಗಲೇ 2 ಬಾರಿ ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದರು.

3ನೇ ಬಾರಿಯ ನೋಟಿಸ್ ಡೂಪ್ಲಿಕೇಟ್ ಅನ್ಸುತ್ತೆ. ಇದನ್ನು ವಿಜಯೇಂದ್ರನೇ ಮಾಡಿಸಿರಬಹುದು. ಅಪ್ಪನ ಸಹಿಯನ್ನೇ ವಿಜಯೇಂದ್ರ ನಕಲಿ ಮಾಡಿಸಿದ್ದ. ಪಕ್ಷದಿಂದ ಅಧಿಕೃತವಾಗಿ ನೋಟಿಸ್ ಬಂದಿಲ್ಲ. ಇಮೇಲ್ ಆಗಲಿ, ರಿಜಿಸ್ಟರ್ ಲೆಟರ್ ಆಗಲೀ ಬಂದಿಲ್ಲ ಎಂದು ಹೇಳಿದರು.

ರಾಜಕೀಯ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಅಬಕಾರಿ ಹಗರಣದ ಬಗ್ಗೆ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಏನೂ ಮಾತನಾಡಿಲ್ಲ. ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ವಿರೋಧ ಪಕ್ಷದ ವೈಫಲ್ಯದ ಲಾಭಆಡಳಿತ ಪಕ್ಷಕ್ಕೆ ಸಿಕ್ಕಿದೆ ಎಂದು ಶಾಸಕ ಬಸನಗೌಡ

[ccc_my_favorite_select_button post_id="119407"]
ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಅಲ್ಲಿ ಇದ್ದಿದ್ದು ಕಣ್ಣು ಕೋರೈಸುತ್ತಿದ್ದ ಲೇಸರ್ ಬೆಳಕಿನ ಲೀಲೆ; ಅದರ ಝಗಮಗದ ನಡುವೆ ಹಿಂಬಾಗಿಲ ಮೂಲಕ ಕಾಣಿಸಿಕೊಂಡಿದ್ದು ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia). ಹಾಲ್ಬಣ್ಣದ ಈ ಚೆಲುವೆಯ ಸೌಂದರ್ಯಕ್ಕೆ ಮೆರುಗು ನೀಡಿದ್ದು

[ccc_my_favorite_select_button post_id="119304"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರೇಮಿಯೋರ್ವ ಆತ್ಮಹತ್ಯೆಗೆ (Suicide) ಶರಣಾಗಿರುವ (Crime) ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

[ccc_my_favorite_select_button post_id="119241"]
ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ನೆಲಮಂಗಲ ಹೆದ್ದಾರಿಯ ಜಿಂದಾಲ್ ಮೇಲ್ಸೇತುವೆ ಬಳಿ ಸಂಭವಿಸಿದ ಕೆಎಸ್ ಆರ್ ಟಿಸಿ ಬಸ್​​ (KSRTC Bus) ಮತ್ತು ಇಂಡಿಕ ಕಾರಿನ (Indica Car) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ದೊಡ್ಡಬಳ್ಳಾಪುರದ ಐವರು ಯುವಕರು

[ccc_my_favorite_select_button post_id="119422"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!