ವಿಜಯಪುರ: ಕಟಾವು ಯಂತ್ರ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ (Accident) ಸಂಭವಿಸಿರುವ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ಸಂಭವಿಸಿದೆ.
ಅಸ್ಕಿ ಗ್ರಾಮದಲ್ಲಿ ಹೆಣ್ಣು ನೋಡಲು ತೆರಳಿ ವಾಪಸ್ ಬರುವಾಗ ಬೆಳೆ ಕಟಾವು ಯಂತ್ರ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ. ಆಕ್ಸಿಡೆಂಟ್ ಆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತರನ್ನು ನಿಂಗಪ್ಪ ಪಾಟೀಲ್ (55 ವರ್ಷ) ಶಾಂತಪ್ಪ ಪಾಟೀಲ್(45 ವರ್ಷ), ಭೀಮಶಿ ಸಂಕನಾಳ(65 ವರ್ಷ) ಶಶಿಕಲಾ(50 ವರ್ಷ) ದಿಲೀಪ್ ಪಾಟೀಲ್ (45 ವರ್ಷ) ಎಂದು ಗುರುತಿಸಲಾಗಿದೆ.
ಕಾರು ಹುಣಸಗಿಯಿಂದ ತಾಳಿಕೋಟೆಗೆ ಹೋಗುತ್ತಿದ್ದಾಗ ಬಿಳೆಬಾವಿ ಕ್ರಾಸ್ ಬಳಿ ಅಪಘಾತಕ್ಕಿಡಾಗಿದೆ.
ತಾಳಿಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.