ಬೆಳಗಾವಿ: ವಿಧಾನಮಂಡಲದ ಚಳಿಗಾಲದ 11ನೇ ಅಧಿವೇಶನ (Winter session) ಬೆಳಗಾವಿಯ ಸುವರ್ಣ ವಿಧಾನಸೌಧ ದಲ್ಲಿ ಸೋಮವಾರದಿಂದ ಆರಂಭವಾಗಲಿದೆ. ಬೆಳಗ್ಗೆ 11ಕ್ಕೆ ಅಧಿವೇಶನ ಆರಂಭವಾಗಲಿದೆ.
ಮೊದಲಿಗೆ ಸಂತಾಪ ಸೂಚನಾ ನಿರ್ಣಯ ಮಂಡನೆಮಾಡಲಿದ್ದು,ಕಳೆದಅಧಿವೇಶನದಿಂದ ಈಚೆಗೆ ನಿಧನಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು.
ಸದನದಲ್ಲಿ ದೊಡ್ಡಬಳ್ಳಾಪುರ ತಾಲೂಕಿಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಬಗರ್ ಹುಕುಂ ಸಮಿತಿಯಲ್ಲಿ ಸ್ವೀಕೃತಗೊಂಡಿರುವ ಅರ್ಜಿಗಳು ಎಷ್ಟು..? ಈ ಪೈಕಿ ಮಂಜೂರಾದ, ವಿಲೇವಾರಿಯಾದ ಹಾಗೂ ತಿರಸ್ಕೃತಗೊಂಡ ಅರ್ಜಿಗಳಷ್ಟು..?
ಮಂಜೂರಾಗಿರುವ ಅರ್ಜಿಗಳ ಪೈಕಿ ಎಷ್ಟು ಅರ್ಜಿಗಳಿಗೆ ಸಾಗುವಳಿ ಚೀಟಿ ವಿತರಿಸಲಾಗಿದೆ; ಸಾಗುವಳಿ ಚೀಟಿ ವಿತರಿಸುವಲ್ಲಿ ವಿಳಂಬವಾಗಲು ಕಾರಣಗಳೇನು..?
ಮಂಜೂರಾಗಿರುವ ಅರ್ಜಿಗಳಿಗೆ ಸಾಗುವಳಿ ಚೀಟಿ ಮತ್ತು ಖಾತೆಯನ್ನು ರೈತರಿಗೆ ಅತೀ ಜರೂರಾಗಿ ನೀಡಲು ಸರ್ಕಾರದಿಂದ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ..?
ಬಾಕಿಯಿರುವ ಅರ್ಜಿಗಳ ವಿಲೇವಾರಿಗೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ; ಯಾವ ಕಾಲಮಿತಿಯೊಳಗೆ ಸಾಗುವಳಿ ಚೀಟಿ ಮತ್ತು ಖಾತೆ ವಿತರಿಸಲಾಗುವುದು.? ಎಂಬುದಾಗಿ ಶಾಸಕ ಧೀರಜ್ ಮುನಿರಾಜು ಕಂದಾಯ ಸಚಿವರನ್ನು ಪ್ರಶ್ನಿಸಲಿದ್ದಾರೆ.
ಉಳಿದಂತೆ ಲಿಖಿತ ಮೂಲಕ ಉತ್ತರಿಸುವ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಕಳೆದ 3 ವರ್ಷಗಳಿಂದ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳು ಯಾವುವು..? (ಕಾಮಗಾರಿವಾರು ಸಂಪೂರ್ಣ ಮಾಹಿತಿ ನೀಡುವುದು)
ಕಳೆದ 3 ವರ್ಷಗಳಲ್ಲಿ ಒಟ್ಟು ಎಷ್ಟು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ; ಯಾವ ಯಾವ ಗುತ್ತಿಗೆದಾರರಿಗೆ ಎಲ್ 1 ನೀಡಲಾಗಿದೆ ; (ಎಲ್ಲಾ ಕಾಮಗಾರಿಗಳ ಎಲ್ 1 ಗುತ್ತಿಗೆದಾರರ ಸಹಿತ ಟೆಂಡರ್ ಆಗಿರುವ ಮಾಹಿತಿಯನ್ನು ಒದಗಿಸುವುದು).
ಸದರಿ ಕಾಮಗಾರಿಗಳ ಪೈಕಿ ಪೂರ್ಣಗೊಂಡಿರುವ, ಪ್ರಗತಿಯಲ್ಲಿರುವ ಮತ್ತು ಸ್ಥಗಿತಗೊಂಡಿರುವ ಕಾಮಗಾರಿಗಳು ಯಾವುವು (ಕಾಮಗಾರಿವಾರು ವಿವರ ನೀಡುವುದು).
ದೊಡ್ಡಬಳ್ಳಾಪುರ ತಾಲ್ಲೂಕಿನ ಕೆ.ಸಿ.ಪಿ ಸರ್ಕಲ್‌ನಿಂದ ರಂಗಪ್ಪ ಸರ್ಕಲ್‌ವರೆಗೆ ಕಾಮಗಾರಿಯ ಟೆಂಡರ್ ಪಡೆದಿರುವ ಗುತ್ತಿಗೆದಾರರು ಯಾರು..? ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದಲ್ಲದೆ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ, ಸದರಿ ಗುತ್ತಿಗೆದಾರಣ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳೇನು ? ಎಂಬುದನ್ನು ಲೋಕೋಪಯೋಗಿ ಇಲಾಖೆ ಸಚಿವರನ್ನು ಪ್ರಶ್ನಿಸಿದ್ದಾರೆ.
ಹಾಗೆ ಕಂದಾಯ ಸಚಿವರಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಎಷ್ಟು ಸರ್ಕಾರಿ ಭೂಮಿ ಇದೆ..? ಸದರಿ ಜಮೀನಿನ ವಿಸ್ತೀರ್ಣವೆಷ್ಟು.? ಅನುಭವದಾರರು ಯಾರು.? (ಗ್ರಾಮವಾರು, ಸರ್ವೇ ನಂ. ವಾರು ಸಂಪೂರ್ಣ ವಿವರ ನೀಡುವುದು)
ಕಳೆದ 3 ವರ್ಷಗಳಿಂದ ಎಷ್ಟು ಸರ್ಕಾರಿ ಭೂಮಿಯನ್ನು ಯಾವ ಯಾವ ಉದ್ದೇಶಕ್ಕಾಗಿ ಬೇರೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಹಾಗೂ ಮೀಸಲಿಡಲಾಗಿದೆ.? (ಇಲಾಖಾವಾರು ವಿವರ ನೀಡುವುದು)
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಗೋಮಾಳಗಳೆಷ್ಟು..?(ಸಂಪೂರ್ಣ ಹಕ್ಕುದಾರರ ಮಾಹಿತಿ ನೀಡುವುದು)
ಪ್ರಸ್ತುತ ಗೋಮಾಳದ ಸ್ಥಿತಿಗತಿಯೇನು..? ಇದುವರೆಗೂ ಎಷ್ಟು ಗೋಮಾಳವು ಒತ್ತುವರಿಯಾಗಿದೆ ? (ಗೋಮಾಳದ ಒತ್ತುವರಿದಾರರ ಹೆಸರು ಸಹಿತ ಸಂಪೂರ್ಣ ವಿವರ ನೀಡುವುದು ಎಂದು ಪ್ರಶ್ನಿಸಿದ್ದಾರೆ.
ಮುಂಜರಾಯಿ ಇಲಾಖೆ ಸಚಿವರ ಕುರಿತು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಒಟ್ಟು ಮುಜರಾಯಿ ಇಲಾಖೆಗೆ ಒಳಪಡುವ ಆಸ್ತಿಯೆಷ್ಟು..? (ಹೋಬಳಿವಾರು ಆಸಿ ಸಂಪೂರ್ಣ ವಿವರ ನೀಡುವುದು)
ಈ ವಿಧಾನಸಭಾ ಕ್ಷೇತ್ರದ ದೇವಸ್ಥಾನಗಳಿಗೆ ಹೆಚ್ಚಿನ ಅನುದಿ ನೀಡಲು ಸರ್ಕಾರವು ಕೈಗೊಳ್ಳುವ ಕ್ರಮಗಳೇನು..? ಎಂದು ಶಾಸಕ ಧೀರಜ್ ಮುನಿರಾಜು ಲಿಖಿತ ರೂಪದಲ್ಲಿ ಉತ್ತರವನ್ನು ಕೋರಿದ್ದಾರೆನ್ನಲಾದ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ದೊರೆತಿದೆ.