Cyclone: 22 ಜಿಲ್ಲೆಗಳಲ್ಲಿ ಶಾಲೆಗಳ ರಜೆ ಘೋಷಣೆ..!

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ (Cyclone) ರೂಪುಗೊಂಡಿರುವ ಕಾರಣ, ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಇಂದು (ಗುರುವಾರ) ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಒಂದರಿಂದ 5 ನೇ ತರಗತಿಗಳಿಗೆ ರಜೆ ಘೋಷಿಸಿದ್ದಾರೆ.

ಕಾಂಚೀಪುರಂ, ಚೆಂಗಲ್ಪಟ್ಟು, ರಾಮನಾಥಪುರಂ, ಮೈಲಾಡುತುರೈ, ತಂಜಾವೂರು, ಪುದುಕೊಟ್ಟೈ ಮತ್ತು ಅರಿಯಲೂರ್ ಸೇರಿದಂತೆ ಎಲ್ಲೆಡೆ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದು ಜಿಲ್ಲಾಡಳಿತ ಘೋಷಿಸಿದೆ.

ಅಲ್ಲದೆ ವೆಲ್ಲೂರಿನ ತಿರುವಳ್ಳುವರ್ ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ಮುಂದೂಡಿದೆ ಎಂದಯ ವರದಿಯಾಗಿದೆ.

ಇನ್ನೂ ಬಂಗಾಳ ಕೊಲ್ಲಿಯಲ್ಲಿ ಮತ್ತೆ ಉಂಟಾಗಿರುವ ಚಂಡಮಾರುತದ (Cyclone) ಪರಿಣಾಮದಿಂದ ಕರ್ನಾಟಕದಲ್ಲಿ ಗುರುವಾರ ಮಳೆಯಾಗುವ ಸಂಭವವಿದ್ದು, ದಕ್ಷಿಣ ಒಳನಾಡಿನ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮ ರಾಜನಗರ, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಡಿ.12ರಂದು ಭಾರೀ ಮಳೆಯಾಗ ಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.

ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮಳೆಯಾಗುವ ಸಂಭವವಿದೆ.

ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆ ಗಳಲ್ಲಿ ಹಗುರದಿಂದ ಸಾಧಾರಣ ಮಂಜು ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರು ನಗರ ಮತ್ತು ಸುತ್ತಲಿನ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 26 ಮತ್ತು 18 ಡಿಗ್ರಿ ತಾಪಮಾನ ದಾಖಲಾಗಲಿದೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ರಾಜಕೀಯ

ಬಾಶೆಟ್ಟಿಹಳ್ಳಿ ಪ.ಪಂ. ಚುನಾವಣೆ: ಜೆಡಿಎಸ್ ಅಭ್ಯರ್ಥಿ ಪರ ಬಿ.ಮುನೇಗೌಡ ಭರ್ಜರಿ ಪ್ರಚಾರ

ಬಾಶೆಟ್ಟಿಹಳ್ಳಿ ಪ.ಪಂ. ಚುನಾವಣೆ: ಜೆಡಿಎಸ್ ಅಭ್ಯರ್ಥಿ ಪರ ಬಿ.ಮುನೇಗೌಡ ಭರ್ಜರಿ ಪ್ರಚಾರ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣಾ ಕಣದಲ್ಲಿ ಸೋಮವಾರದಿಂದ ಜೆಡಿಎಸ್ (JDS) ಅಭ್ಯರ್ಥಿಗಳ ಪರವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ (B. Mune Gowda) ಅವರು ಮತಯಾಚನೆಗೆ ಚಾಲನೆ ನೀಡಿದ್ದಾರೆ.

[ccc_my_favorite_select_button post_id="117387"]
ಹಿರಿಯ ಶಾಸಕ ಶಾಮಾನೂರು ಶಿವಶಂಕರಪ್ಪ ನಿಧನ

ಹಿರಿಯ ಶಾಸಕ ಶಾಮಾನೂರು ಶಿವಶಂಕರಪ್ಪ ನಿಧನ

ರಾಜ್ಯ ಕಾಂಗ್ರೆಸ್ ನ ದಾವಣಗೆರೆ ಮೂಲದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ವಿಧಿವಶರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

[ccc_my_favorite_select_button post_id="117359"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕಬ್ಬಡಿ ಚಾಂಪಿಯನ್ ಶಿಪ್; ಕರ್ನಾಟಕಕ್ಕೆ ಕಂಚಿನ ಪದಕ.. ದೊಡ್ಡಬಳ್ಳಾಪುರದ ಹರೀಶ್ ಭಾಗಿ

ಕಬ್ಬಡಿ ಚಾಂಪಿಯನ್ ಶಿಪ್; ಕರ್ನಾಟಕಕ್ಕೆ ಕಂಚಿನ ಪದಕ.. ದೊಡ್ಡಬಳ್ಳಾಪುರದ ಹರೀಶ್ ಭಾಗಿ

ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ಜಾಲ್ಗೊಂನ್ ನಲ್ಲಿ ನಡೆದ 5ನೇ ಫೆಡರೇಶನ್ ಕಪ್ ನ್ಯಾಷನಲ್ ಕಬ್ಬಡಿ ಚಾಂಪಿಯನ್ ಶಿಪ್ ನಲ್ಲಿ (Kabbadi Championship) ಭಾಗವಹಿಸಿದ ಕರ್ನಾಟಕದ ಕಬ್ಬಡಿ ತಂಡ ಕಂಚಿನ

[ccc_my_favorite_select_button post_id="117398"]
ದೊಡ್ಡಬಳ್ಳಾಪುರ: ಹಾಡೋನಹಳ್ಳಿ ಚೌಡೇಶ್ವರಿ ದೇವಸ್ಥಾನದಲ್ಲಿ ಮತ್ತೆ ಕಳ್ಳತನ..! CCTV Video ನೋಡಿ

ದೊಡ್ಡಬಳ್ಳಾಪುರ: ಹಾಡೋನಹಳ್ಳಿ ಚೌಡೇಶ್ವರಿ ದೇವಸ್ಥಾನದಲ್ಲಿ ಮತ್ತೆ ಕಳ್ಳತನ..! CCTV Video ನೋಡಿ

ಘಾಟಿ ಸುಬ್ರಹ್ಮಣ್ಯ ರಸ್ತೆಯಲ್ಲಿನ ಹಾಡೋನಹಳ್ಳಿಯ ಚೌಡೇಶ್ವರಿ ದೇವಸ್ಥಾನದಲ್ಲಿ (Chowdeshwari Temple) ಮತ್ತೆ ಕಳ್ಳತನ ಪ್ರಕರಣ ನಡೆದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

[ccc_my_favorite_select_button post_id="117382"]
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ (Accident) ಮೂವರು ಸಾವನಪ್ಪಿರುವ ಘಟನೆ *** ಹೊರವಲಯದ *** ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="117239"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]