ತಿರುವನಂತಪುರಂ: ಹನಿಮೂನ್ ಮುಗಿಸಿ ಮನೆಗೆ ತೆರಳುತ್ತಿದ್ದ ನವ ದಂಪತಿಗಳಿದ್ದ ಕಾರು ಅಪಘಾತಕ್ಕೀಡಾಗಿ (Accident) ಸಾವನಪ್ಪಿರುವ ಘಟನೆ ಕೇರಳದ ಪಥನಂತಿಟ್ಟ ಜಿಲ್ಲೆಯ ಕೂಡಲ್‌ನಲ್ಲಿ ನಡೆದಿದೆ.
ನಿಖಿಲ್ ಈಪೆನ್ (29 ವರ್ಷ) ಮತ್ತು ಅನು ಬಿಜು (26 ವರ್ಷ) ಮೃತ ದುರ್ದೈವಿಗಳಾಗಿದ್ದು, ಅವರು ಮಲೇಷ್ಯಾದಲ್ಲಿ ಹನಿಮೂನ್ ಮುಗಿಸಿ ಸಂತೋಷದಿಂದ ಹಿಂದಿರುಗಿದ ನಂತರ ಕಾದಿರುವ ದುರಂತವನ್ನು ಊಹಿಸಲು ಸಾಧ್ಯವಾಗಲಿಲ್ಲ.
ವಿಧಿಯ ಕ್ರೂರ ಟ್ವಿಸ್ಟ್ನಲ್ಲಿ, ಕೇವಲ 15 ದಿನಗಳ ಹಿಂದೆ ತಮ್ಮ ವಿವಾಹದ ಪ್ರತಿಜ್ಞೆಯನ್ನು ತೆಗೆದುಕೊಂಡ ದಂಪತಿಗಳು ಮಲೇಷ್ಯಾ ಪ್ರವಾಸಕ್ಕೆ ತೆರಳಿ, ಮರಳಿ ತಿರುವನಂತಪುರಂ ವಿಮಾನ ನಿಲ್ದಾಣದಿಂದ ರಾನ್ನಿಯಲ್ಲಿರುವ ತಮ್ಮ ಮನೆಗೆ ಪ್ರಯಾಣಿಸುವಾಗ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಆಂಧ್ರಪ್ರದೇಶದಿಂದ ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಿಖಿಲ್ ಅವರ ತಂದೆ ಮಥಾಯಿ ಈಪೆನ್ ಮತ್ತು ಅನು ಅವರ ತಂದೆ ಬಿಜು ಜಾರ್ಜ್ ಕೂಡ ಸಾವನ್ನಪ್ಪಿದ್ದಾರೆ.
ಪೊಲೀಸರ ಪ್ರಕಾರ, ಭಾನುವಾರ ಮುಂಜಾನೆ 4:05 ರ ಸುಮಾರಿಗೆ ಈ ಅಪಘಾತವು ಮುರಿಂಜಕಲ್ ಎಂಬಲ್ಲಿ ಸಂಭವಿಸಿದೆ, ಇದು ಪರವೂರು-ಮುವಾಟ್ಟುಪುಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪೀಡಿತ ಪ್ರದೇಶವೆಂದು ಕುಖ್ಯಾತವಾಗಿದೆ.
ಶಬರಿಮಲೆ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ
ಈಪೆನ್ ಮತ್ತು ಬಿಜು ತಮ್ಮ ಮಕ್ಕಳನ್ನು ಒಟ್ಟಿಗೆ ಮನೆಗೆ ಸ್ವಾಗತಿಸಲು ಶನಿವಾರ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ, ಕುಟುಂಬವು ತಮ್ಮ ಮನೆ ಇರುವ ಕೇವಲ 7 ಕಿಲೋಮೀಟರ್ ದೂರದಲ್ಲಿ ದುರಂತ ಅಪಘಾತ ಸಂಭವಿಸಿದೆ.
ಬಸ್‌ನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.