ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಟಿವಿಎಸ್ ಎಕ್ಸ್‌ಎಲ್ ನಲ್ಲಿ ಸಾಗುತ್ತಿದ್ದ ದಂಪತಿಗಳಿಬ್ಬರು ಸಾವನಪ್ಪಿರುವ ಘಟನೆ ಕನ್ನಮಂಗಳ ಗೇಟ್ ಬಳಿ ಸಂಭವಿಸಿದೆ.
ಮೃತ ದುರ್ದೈವಿಗಳನ್ನು ರಾಮದೇವನಹಳ್ಳಿ ನಿವಾಸಿಗಳಾದ ಅನ್ನದಾನಯ್ಯ (65 ವರ್ಷ) ಮತ್ತು ನಾಗರತ್ನಮ್ಮ ( 58 ವರ್ಷ) ಎಂದು ಗುರುತಿಸಲಾಗಿದೆ.
ಮೃತರು ಇಂದು ಸಂಜೆ ರಾಮದೇವನಹಳ್ಳಿ ಗ್ರಾಮದಿಂದ ಚಿಕ್ಕ ಮಧುರೆ ಶನಿ ಮಹಾತ್ಮ ಸ್ವಾಮಿ ದೇವಾಲಯಕ್ಕೆ ತೆರಳುವ ವೇಳೆ ಕನ್ನಮಂಗಲ ಗೇಟ್ ಬಳಿಯ ಪೆಟ್ರೋಲ್ ಬಂಕ್ ತಿರುವಿನಲ್ಲಿ ಕ್ಯಾಂಟರ್ ಏಕಾಏಕಿ ಬಂದು ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಗಾಯಾಳುಗಳನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ದಂಪತಿಗಳು ಮೃತಪಟ್ಟಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.