ಬೆಂಗಳೂರು ಗ್ರಾಮಾಂತರ ಜಿಲ್ಲೆ: ಪ್ರಾಣಕ್ಕೆ ಕುತ್ತು ತರುವ ಅಪಾಯಕಾರಿ ದ್ವಿಚಕ್ರ ವಾಹನ ವ್ಹೀಲಿಂಗ್ (Wheeling) ವಿರುದ್ಧ ಎಷ್ಟೇ ಜಾಗೃತಿ ಮೂಡಿಸಿದರೂ, ಪೊಲೀಸರು ಕಠಿಣ ಕ್ರಮಕೈಗೊಂಡರು, ಬುದ್ದಿ ಕಲಿಯದ ಯುವಜನತೆ ಪ್ರಾಣಕ್ಕೇ ಕುತ್ತು ಬರುತ್ತಿದ್ದರೂ ಶೋಕಿ ಮಾಡುವುದನ್ನು ಬಿಡುತ್ತಿಲ್ಲ.
ಇಂಥದ್ದೇ ಒಂದು ಘಟನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಬೈಪಾಸ್ ಬಳಿ ವ್ಹೀಲಿಂಗ್ ಮಾಡಲು ಹೋಗಿ ಇಬ್ಬರು ಯುವಕರು ಸಾವನಪ್ಪಿರುವ ಘಟನೆ ನಡೆದಿದೆ.
ವಿಜಯಪುರ ನಿವಾಸಿಗಳಾದ 21 ವರ್ಷದ ಅರ್ಫಾಜ್ ಹಾಗೂ ಮನೋಜ್ ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡುತ್ತಿರುವಾದ ಟ್ಯಾಂಕರ್ಗೆಗೆ ಡಿಕ್ಕಿ ಹೊಡೆದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.