ಹೈದರಾಬಾದ್; ಪುಷ್ಪ 2 ಸಿನಿಮಾ ಪ್ರೀಮಿಯರ್ ಶೋ ವೇಳೆ ತೆಲಂಗಾಣದ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಉಂಟಾದ ಮಹಿಳೆಯೋರ್ವ ಸಾವಿನ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದನ್ನು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pavan kalyan) ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಂಗಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಆಂದ್ರಪ್ರದೇಶದ ಡಿಸಿಎಂ, ತೆಲುಗು ಚಿತ್ರರಂಗ್ ಖ್ಯಾತ ನಟ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಬಂಧನದ ವಿಷಯದಲ್ಲಿ ತೆಲಂಗಾಣ ಪೊಲೀಸರನ್ನು ದೂಷಿಸುವುದಿಲ್ಲ ಎಂದು ಹೇಳಿದ್ದು, ಕಾನೂನು ಎಲ್ಲರಿಗೂ ಒಂದೇ ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಬೇಕೆಂದು ಹೇಳಿದ್ದಾರೆ.
ಇದೇ ವೇಳೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಶ್ರೇಷ್ಠ ನಾಯಕ (“great leader”) ಎಂದು ಹೇಳಿರುವ ಎನ್ ಡಿಎ ಮಿತ್ರಪಕ್ಷ ಜನಸೇನಾ ನಾಯಕ ಪವನ್ ಕಲ್ಯಾಣ್, ಆ ಸ್ಥಾನದಲ್ಲಿ ನಾ ಇದ್ದಿದ್ದರು ಪೊಲೀಸರು ಅದೇ ಕೆಲಸ ಮಾಡ್ತಾ ಇದ್ದರು. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ.
ಇಲ್ಲಿ ಪ್ರಶ್ನೆ ವ್ಯಕ್ತಿ ಯಾರು ಎಂಬುದಲ್ಲ, ಘಟನೆ ಏನಾಯಿತು ಎಂಬುದು. ಕಾಲ್ತುಳಿತ ಸಂಭವಿಸುತ್ತಿದ್ದಂತೆಯೇ ಅಲ್ಲು ಅರ್ಜುನ್ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಬೇಕಿತ್ತು ಎಂದು ಪವನ್ ಕಲ್ಯಾಣ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಘಟನೆಗೆ ಕೇವಲ ಅಲ್ಲು ಅರ್ಜುನ್ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇಡೀ ಸಮಸ್ಯೆಯನ್ನ ಅಲ್ಲು ಅರ್ಜುನ್ ಮೇಲೆ ಹಾಕಿ ಆರೋಪ ಮಾಡೋದು ಸರಿಯಲ್ಲ ಅಂತ ಅನಿಸುತ್ತೆ.
ಅಲ್ಲು ಅರ್ಜುನ್ ತಮ್ಮ ಪುಷ್ಪ 2 ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಥಿಯೇಟರ್‌ಗೆ ಭೇಟಿ ನೀಡಿದ್ದರು. ಚಿತ್ರನಟರ ಭೇಟಿ ಗೊಂದಲಕ್ಕೆ ಕಾರಣವಾಗಿ ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ 35 ವರ್ಷದ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗ ಕೋಮಾದಲ್ಲಿದ್ದಾನೆ.
ಇದಾದ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು, ಬಂಧನದ ಬೆನ್ನಲ್ಲೇ ಜಾಮೀನು ನೀಡಲಾಯಿತು.
సంధ్య థియేటర్ ఘటనపై పవన్ కళ్యాణ్ స్పందన
— Telugu Scribe (@TeluguScribe) December 30, 2024
గోటితో పోయేదాన్ని గొడ్డలి దాకా తెచ్చారు
అభిమాని మృతి చెందిన తర్వాత వెంటనే వాళ్ల ఇంటికి అల్లు అర్జున్ కాకపోయినా ఎవరైనా వెళ్లి పరామర్శించాల్సింది
మానవతా దృక్పథం లోపించినట్లైంది
ఒక్కోసారి తప్పు చేసినపుడు తిట్లు పడాలి తప్పదు
అల్లు అర్జున్… pic.twitter.com/TUMGiyI7lk
ಇದರ ಬೆನ್ನಲ್ಲೇ ಸಿಎಂ ರೇವಂತ್ ರೆಡ್ಡಿ, ಘಟನೆಯ ಸಂದರ್ಭದಲ್ಲಿ ಅಲ್ಲು ಅರ್ಜುನ್ ವರ್ತನೆಯನ್ನು ವ್ಯಾಪಕವಾಗಿದೆ ಆಕ್ಷೇಪ ವ್ಯಕ್ತಪಡಿಸಿದರು, ಜನ ಸಾಮಾನ್ಯರಿಗಾಗಿ ಪ್ರಭಾವಿ ಇಡೀ ಚಿತ್ರರಂಗದ ವಿರುದ್ಧವೇ ದೊಡ್ಡ ಮಟ್ಟದಲ್ಲಿ ಚಾಟಿ ಬೀಸುವ ಮೂಲಕ, ವ್ಯಾಪಕ ಪ್ರಶಂಸೆಗೆ ಕಾರಣರಾಗಿದ್ದಾರೆ.
సినిమా ఇండస్ట్రీలో ఎవర్నీ అల్లు అర్జున్ స్థాయిలో అరెస్ట్ చేయలేదు అని అనుకుంటున్నారు
— Telugu Scribe (@TeluguScribe) December 30, 2024
దట్ ఈజ్ రేవంత్ రెడ్డి గారు
అల్లు అర్జున్ స్థానంలో నేనున్నా అనుమానం లేకుండా అలాగే అరెస్ట్ చేసేవాడు pic.twitter.com/myhvotFe9x