ಹೈದರಾಬಾದ್: ದಶಕಗಳ ಕಾಲ ದೇಶವನ್ನಾಳಿದ ಮಾಜಿ ಪ್ರಧಾನಿ, ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದ ಡಾ.ಮನಮೋಹನ್ ಸಿಂಗ್ (Manmohan Singh) ಅವರಿಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಕೇಂದ್ರ ಸರಕಾರವನ್ನು ತೆಲಂಗಾಣ ವಿಧಾನಸಭೆ ಆಗ್ರಹಿಸಿದೆ.
ಈ ಸಂಬಂಧ ಸೋಮವಾರ ವಿಧಾನ ಸಭೆಯಲ್ಲಿ ಸರ್ವಾನುಮತ ದಿಂದ ನಿರ್ಣಯ ಕೈಗೊಳ್ಳಲಾಗಿದೆ.
ಸೋಮವಾರದ ಕಲಾಪ ಆರಂಭದಲ್ಲೇ ಡಾ.ಸಿಂಗ್ ಅವರಿಗೆ ಸಂತಾಪ ಸೂಚನೆ ನಡೆಯಿತು. ತೆಲಂಗಾಣ ರಾಜ್ಯದ ರಚನೆಯಲ್ಲಿ ಡಾ.ಸಿಂಗ್ ಅವರ ಪಾತ್ರ ಮಹತ್ವದ್ದು ಎಂದು ಸಿಎಂ ರೇವಂತ್ ರೆಡ್ಡಿ ಸ್ಮರಿಸಿದರು.
ಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸುವ ನಿಲುವಳಿಯನ್ನೂ ಮಂಡಿಸಿದರು.
మన స్వరాష్ట్ర చిరకాల స్వప్నాన్ని…
— Revanth Reddy (@revanth_anumula) December 30, 2024
పార్లమెంటరీ ప్రక్రియ ద్వారా సాకారం చేసిన మాజీ ప్రధాన మంత్రి స్వర్గీయ డాక్టర్ మన్మోహన్ సింగ్…తెలంగాణ సమాజానికి ఆత్మబంధువు.
ఆయనకు నాలుగు కోట్ల తెలంగాణ ప్రజల తరపున శాసన సభ ఘన నివాళి అర్పిస్తోంది.
ఆ మహనీయుడికి భారతరత్న ఇవ్వాలని…
కేంద్ర… pic.twitter.com/K6h66PgUm8
ಸದನ ಸದನ 2 ನಿಮಿಷಗಳ ಮೌನ ಆಚರಿಸಿತು.