ವಿಜಯಪುರ; ವಿಜಯೇಂದ್ರ ಭೇಟಿಯಾಗೋ ಗರ್ಜು ಬಿದ್ದಿಲ್ಲ, ಯತ್ನಾಳ್ ಏನು ಅಂತ ಜಗತ್ತಿಗೆ ಗೊತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (basangouda patil yatnal) ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ನೀವೋಗಿ ವಿಜಯೇಂದ್ರ ಜೊತೆ ಮಾತಾಡಿ ಬಿಜೆಪಿಯಲ್ಲಿ ಎಲ್ಲಾ ಸರಿ ಹೋಗುತ್ತಾ.? ಎಂಬ ಖಾಸಗಿ ಸುದ್ದಿವಾಹಿನಿ ವರದಿಗಾರನ ಪ್ರಶ್ನೆಗೆ ತೀಕ್ಷ್ಣ ಉತ್ತರ ನೀಡಿರುವ ಯತ್ನಾಳ್, ನನಗೇನ್ ಅಂತ ಗರ್ಜು ಬಿದ್ದಿಲ್ಲರೀ, ಯತ್ನಾಳ್ ಏನು ಅಂತ ಜಗತ್ತಿಗೆ ಗೊತ್ತಿದೆ.
ನಾನು ಅಡ್ಜೆಸ್ಟ್ ಆಗಿದ್ದರೆ, ನನ್ನ ಸಕ್ಕರೆ ಕಾರ್ಖಾನೆಗೆ ಇಷ್ಟು ತೊಂದರೆ ಕೊಡ್ತಾ ಇರಲಿಲ್ಲ ಕಾಂಗ್ರೆಸ್ ನವರು ಎಂದಿದ್ದಾರೆ.
ವಿಜಯೇಂದ್ರ ಅವರೇ ನಾ ಮಾತುಕತೆ ರೆಡಿ, ಬನ್ನಿ ಪಕ್ಷದಲ್ಲಿ ಒಟ್ಟಾಗಿ ಹೋಗೋಣ ಎಂದು ಕರೆದರೆ ಎಂಬ ಮತ್ತೊಂದು ಪ್ರಶ್ನೆಗೆ, ನಾನು ಮಾತಾಡುವ ಅವಶ್ಯಕತೆಯಿಲ್ಲ. ಮೇಲಿನ ಹೈಕಮಾಂಡ್ ಕರೆದು ಮಾತಾಡಲಿ ಮಾತಾಡುತ್ತೇನೆ.
ನಮಗೆ ಏನು ಅನ್ಯಾಯ ಆಗಿದೆ ನಮಗೆ ಗೊತ್ತು. ಮನಸ್ಸಿಗೆ ನೋವಿದೆ, ರಮೇಶ್ ಜಾರಕ್ಕಿಹೋಳಿ ಅವರ ಮನಸ್ಸಿಗೆ ನೋವಿದೆ. ಅಂತೆಯೇ ಕೆಲವು ಮಂದಿಗೆ ನೋವಿದೆ ಅದಕ್ಕೆ ಇಲ್ಲಿ ಕೂತು ಮಾತಾಡಿದರೆ ಆಗಲ್ಲ. ಹೈಕಮಾಂಡ್ ಜೊತೆ ಮಾತಾಡಬೇಕು ಎಂದರು.
ಡಿಕೆ ಶಿವಕುಮಾರ್ ಜೊಡ ಅಡ್ಜಸ್ಟ್‌ಮೆಂಟ್ ಇಲ್ಲ, ಸಿದ್ದರಾಮಯ್ಯ ಜೋಡ ಅಡ್ಜಸ್ಟ್‌ಮೆಂಟ್ ಇಲ್ಲ, ಜಮೀರ್ ಜೊತೆ ನಾನು ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿಲ್ಲ. ಅವರ ಜೊತೆ ಬಿಜಿನೆಸ್ ಇಲ್ಲ, ಪಾರ್ಟನರ್ ಇಲ್ಲ, ಸೀಟ್ ಅಡ್ಜಸ್ಟ್‌ಮೆಂಟ್ ಕೂಡ ಇಲ್ಲ.
ರಾಜ್ಯಾಧ್ಯಕ್ಷರಿದ್ದಾರೆ ಅವರಿಗೆ ಮೇಲಿಂದ ಮೇಲೆ ಹೈಕಮಾಂಡ್ ಅಪಾಯಿಂಟ್ ಮೆಂಟ್ ಕೊಡ್ತಾರೆ ಅದಕ್ಕೆ ಹೋಗ್ತಾರೆ. ಅದರಲ್ಲೇನು ತಪ್ಪಿದೆ. ನಾವೋಗಿ ಅಲ್ಲೇನು ಕೇಳೋದ್ ಇದೆ. ವಕ್ಫ್ ಸಲುವಾಗಿ ಹೋಗ್ತೀವಿ ಅಲ್ಲಿ ಮಾತಾಡ್ತಿವಿ.
ಈಗೇನು ಹೋಗಿವಂತದ್ ಇಲ್ಲ, ನಾವ್ ಯಾರ ವಿರುದ್ಧ ದೂರು ನೀಡುವುದಿಲ್ಲ. ಆರೋಪದ ಮಾಡೋದಿಲ್ಲ. ನಾವು ಜನರ ಜೊತೆ ಇದ್ದೇವೆ. ನಮ್ಮದು ಜನಾಂದೋಲ, ಡೆಲ್ಲಿ ಆಂದೋಲನವಲ್ಲ ಎಂದು ವಿಜಯೇಂದ್ರ ಡೆಲ್ಲಿ ಭೇಟಿಯನ್ನು ಲೇವಡಿ ಮಾಡಿದರು.
ನನ್ನಷ್ಟು ಪಕ್ಷದ ನಿಷ್ಟಾವಂತರು ಯಾರು ಇಲ್ಲ, ನಾ ಏನ್ ಪಕ್ಷ ವಿರೋಧಿ ಕೆಲಸ ಮಾಡಿನಿ..? ನಾ ಏನ್ ವೀಕ್ ಕ್ಯಾಂಡಿಡೇಟ್ ಹಾಕಿಸಿಕೊಂಡು ಗೆದ್ದವನಲ್ಲ. ನಾನು ಕಾಂಗ್ರೆಸ್ ಬಿಕ್ಷೆಯಿಂದ ಎಂಎಲ್ಎ ಆದವನಲ್ಲ. ಕೇವಲ ಹಿಂದೂಗಳಿಂದ, ಬಿಜೆಪಿಯಿಂದ ಎಂಎಲ್ಎ ಆದವನು ಎಂದಿದ್ದಾರೆ.