ದೊಡ್ಡಬಳ್ಳಾಪುರ, (Doddaballapura): ಶಾಂತಿನಗರದ ಮುಖ್ಯ ರಸ್ತೆಯಲ್ಲಿ ಮಂಗಳವಾರ ರಾತ್ರಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಎರಡನೇ ವ್ಯಕ್ತಿಕೂಡ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ನಿನ್ನೆಯಷ್ಟೇ ಕಚೇರಿ ಪಾಳ್ಯದ ನಿವಾಸಿ ಶಿವಕುಮಾರ್ ಸಾವನಪ್ಪಿದ್ದ ಬೇನ್ನಲ್ಲೆ, ಇಂದು ಅವರ ಜೊತೆ ಗಾಯಗೊಂಡಿದ್ದ ಗಜೇಂದ್ರ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಗಜೇಂದ್ರ ಅವರ ಅಗಲಿಕೆಯ ನೋವಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊಸ ವರ್ಷದ ಸಂಭ್ರಮಾಚರಣೆ ನಂತರ ಮನೆಗೆ ಬರುವಾಗ ಶಾಂತಿನಗರದ ಮುಖ್ಯ ರಸ್ತೆಯಲ್ಲಿ ಮಂಗಳವಾರ ರಾತ್ರಿ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿತ್ತು.
ಇದರಲ್ಲಿ ಶಿವಕುಮಾರ್, ಗಜೇಂದ್ರ ಮತ್ತು ಅರೆಗುಡ್ಡದಹಳ್ಳಿ ಪ್ರಮೋದ್ ಗಂಭೀರವಾಗಿ ಗಾಯಗೊಂಡಿದ್ದರು.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.