ಪ್ರಯಾಗ್‌ರಾಜ್: 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ (Kumbh mela) ಜ.13ರಿಂದ (ಪೌಶ್ ಪೂರ್ಣಿಮಾ) ಫೆ.26ರವರೆಗೆ (ಮಹಾ ಶಿವರಾತ್ರಿ) ನಡೆಯಲಿದ್ದು, ಈಗಾಗಲೇ ನಾಗಾಸಾಧುಗಳು ಮೆರವಣಿಗೆ ಮೂಲಕ ಪ್ರಯಾಗ್‌ರಾಜ್‌ಗೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಮಹಾಕುಂಭಮೇಳಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆಯಿದ್ದು ನಮ್ಮ ಸಂಸ್ಕತಿ, ಸಂಪ್ರದಾಯದ ಪ್ರತೀಕವಾಗಿದೆ.
ಈ ಬಾರಿಯ ಮಹಾ ಕುಂಭ ಮೇಳದಲ್ಲಿ ಪ್ರಪಂಚದಾದ್ಯಂತದ 45 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾಕುಂಭ ಮೇಳಕ್ಕೆ ಸಾವಿರಾರು ಸಾಧು, ಸಂತರು, ಸಾಧಕರು ಭೇಟಿ ನೀಡುತ್ತಾರೆ. ಈ ಮಹಾ ಕುಂಭ ಮೇಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ ಎನ್ನಲಾಗುತ್ತದೆ.
ಈ ಬಾರಿ ಮಹಾಕುಂಭದಲ್ಲಿ ಅನೇಕ ಹೊಸ ಆಧುನಿಕ ಸೌಲಭ್ಯಗಳು ಲಭ್ಯವಾಗಲಿವೆ. ಇದು ಮೊದಲಿಗಿಂತ ಹೆಚ್ಚು ಆಧುನಿಕ, ಸ್ವಚ್ಛ ಮತ್ತು ತಂತ್ರಜ್ಞಾನದಿಂದ ಸಮೃದ್ಧವಾಗಿದೆ.

ಈ ಸಿದ್ಧತೆಗಳ ಬಗ್ಗೆ ಬೆಳಕು ಚೆಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಮಹಾಕುಂಭವು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಸನಾತನ ಸಂಪ್ರದಾಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಲ್ಲದೆ, ಡಿಜಿಟಲ್ ಕುಂಭ ಎಂದು ತನ್ನದೇ ಆದ ಗುರುತನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
2025ರ ಮಹಾಕುಂಭವು ಕೇವಲ ಧಾರ್ಮಿಕ ಹಬ್ಬವಾಗಿರದೆ, ಭಾರತದ ಆಧುನಿಕ ಚಿಂತನೆ ಮತ್ತು ಪ್ರಾಚೀನ ಸಂಪ್ರದಾಯಗಳ ಸಭೆಯಾಗಿದೆ. ಈ ಕಾರ್ಯಕ್ರಮವು ಭಕ್ತರಿಗೆ ಮಾತ್ರವಲ್ಲದೆ ದೇಶ ಮತ್ತು ಜಗತ್ತಿಗೆ ಒಂದು ಅನನ್ಯ ಅನುಭವವನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ.

DD News ಚಿತ್ರ