Astrology: Likely to be a memorable day

Astrology: ಜ.07 ದಿನ ಭವಿಷ್ಯ; ಈ ರಾಶಿಯವರಿಗೆ ಅನಾವಶ್ಯಕವಾಗಿ ಚಿಂತೆ ಬೇಡ, ಆತುರ ಬೇಡ – ಎನ್ಎಸ್ ಶರ್ಮ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ  ಅಷ್ಟಮಿ ಜ.7.2025 ಮಂಗಳವಾರ; ವಿಶೇಷವಾಗಿ ದುರ್ಗಾಪರಮೇಶ್ವರಿ ದೇವಿಗೆ ಕೆಂಪು ಕಣಗಿಲ್ಲ ಹೂವಿನಿಂದ ಪೂಜೆ ಮಾಡಿ, ತುಪ್ಪದ ದೀಪಗಳನ್ನು ಹಚ್ಚಿ, ಪ್ರಾರ್ಥಿಸಿದರೆ ದಿನವೂ ಶುಭವಾಗುತ್ತದೆ. Astrology

ಮೇಷ ರಾಶಿ: ಮನಸ್ಸಿನಲ್ಲಿ ನಾನಾ ಚಿಂತೆ, ಅನವಶ್ಯಕ ತಿರುಗಾಟ, ಕಾರ್ಯದಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ವಿದ್ಯಾ ಲಾಭ, ಅನುಕೂಲವಾದ ದಿನ, ಧನಾರ್ಜನೆಯಲ್ಲಿ ಪ್ರಗತಿ. (ಪರಿಹಾರಕ್ಕಾಗಿ ದತ್ತಾತ್ರೇಯರ ಸ್ತೋತ್ರವನ್ನು ಪಠಣೆ ಮಾಡಿ)

ವೃಷಭ ರಾಶಿ: ಕಾರ್ಯಗಳಲ್ಲಿ ಜಯ, ವಿದ್ಯಾನುಕೂಲ, ಯಾವುದೇ ಕಾರ್ಯವನ್ನು ಮಾಡುವಾಗ ಗಮನವಿಟ್ಟು ಮಾಡಿ, ಆತುರ ಬೇಡ. ಬಂಧು ಮಿತ್ರರ ಮಾತುಗಳನ್ನು ನಿರ್ಲಕ್ಷಿಸಬೇಡಿ. (ಪರಿಹಾರಕ್ಕಾಗಿ ಗಣಪತಿಗೆ ಪೂಜೆಯನ್ನು ಮಾಡಿ)

ಮಿಥುನ ರಾಶಿ: ಸ್ವಲ್ಪ ಕಠಿಣವಾದ ಸ್ವಭಾವ, ಆತುರ, ಕೆಲಸಗಳು ಕೆಡುವ ಸಂಭವ. ಧನಾರ್ಜನೆಯಲ್ಲಿ ಪ್ರಗತಿ ಇಲ್ಲ, ವಿದ್ಯಾರ್ಜನೆ ಸ್ವಲ್ಪ ಕಷ್ಟ, ಕಾರ್ಯಕ್ಕೆ ತಕ್ಕಂತೆ ಗುರಿಯನ್ನು ಇಟ್ಟುಕೊಳ್ಳಿ. ವ್ಯಸನಗಳು ಬೇಡ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯನ್ನು ಪೂಜೆ ಮಾಡಿ)

ಕಟಕ ರಾಶಿ: ದೂರದ ಪ್ರಯಾಣದ ಆಸೆ. ಆದರೆ ಧನದ ಭಾವ, ಅದಕ್ಕೋಸ್ಕರವಾಗಿ ಕೆಲವು ಕಾರ್ಯಗಳನ್ನು ಮಾಡುವ ಹಂಬಲ. ಯಾವುದೇ ಕೆಲಸವನ್ನು ಮಾಡಲು ಧನವನ್ನು ಹೂಡಿಕೆ ಮಾಡುವ ಮುನ್ನ ಎಚ್ಚರವಿರಲಿ, ಆತುರ ನಿರ್ಧಾರ ಬೇಡ.
(ಪರಿಹಾರಕ್ಕಾಗಿ ಶಿವನ ದೇವಾಲಯದಲ್ಲಿ ಬಿಲ್ವಪತ್ರೆಯಿಂದ ಪೂಜೆ ಮಾಡಿಸಿ)

ಸಿಂಹ ರಾಶಿ: ಎಲ್ಲ ಕಾರ್ಯದಲ್ಲೂ ಮುನ್ನುಗ್ಗ ಬೇಡಿ, ಅವಕಾಶ, ದೃಢವಾದ ನಿರ್ಧಾರ. ಅತ್ಯಂತ ಸುಖಕರವಾದ ಪ್ರಯಾಣ, ಶ್ರೇಷ್ಠವಾದ ಯೋಚನೆಗಳು ಒಳ್ಳೆಯದಾಗುತ್ತದೆ. ಆತುರ ಬೇಡ ಎಚ್ಚರಿಕೆ ಬಹಳ ಅಗತ್ಯ. (ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)

ಕನ್ಯಾ ರಾಶಿ: ಶಾಂತವಾಗಿ ಆಲೋಚನೆ ಮಾಡಿ, ಅತ್ಯಂತ ಒಳ್ಳೆಯ ಮನಸ್ಸನ್ನು, ಪ್ರಶಾಂತವಾದ ನೆಮ್ಮದಿಯಾದ ಹೃದಯವನ್ನು ಹೊಂದಿದ್ದೀರಿ, ಆತುರ ಏಕೆ? ಸಮಾಧಾನದಿಂದ ವರ್ತನೆ ಮಾಡಿ. ಕೋಪ ಮಾಡಿಕೊಳ್ಳಬೇಡಿ. (ಪರಿಹಾರಕ್ಕಾಗಿ ದುರ್ಗಾದೇವಿಯ ಪೂಜೆಯನ್ನು ಮಾಡಿ)

ತುಲಾ ರಾಶಿ: ಅನಾವಶ್ಯಕವಾಗಿ ಚಿಂತೆ ಬೇಡ, ಆತುರ ಬೇಡ, ದೀರ್ಘವಾಗಿ ಯೋಚಿಸಿ. ಶುಭವಾಗುತ್ತದೆ, ಕಾರ್ಯಗಳಲ್ಲಿ ಸಾಧನೆ ಉನ್ನತ ಮಟ್ಟದ್ದಾಗಿದೆ, ಬಹಳ ಸಂತೋಷ. ಆದರೆ ಬಂಧು ಮಿತ್ರರ ಜೊತೆ ವ್ಯವಹಾರ ಬೇಡ, ಎಚ್ಚರಿಕೆ. (ಪರಿಹಾರಕ್ಕೆ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ)

ವೃಶ್ಚಿಕ ರಾಶಿ: ಕೆಲಸಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಂಭವವಿದೆ ಎಚ್ಚರಿಕೆ, ದೀರ್ಘವಾಗಿ ಯೋಚಿಸಿ,, ಎಲ್ಲರ ಭಾವನೆಗೂ ಬೆಳಕನ್ನು ಚೆಲ್ಲಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ವಿದ್ಯೆಯಲ್ಲಿ ಬಹಳ ಅನುಕೂಲ. (ಪರಿಹಾರಕ್ಕಾಗಿ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ)

ಧನಸ್ಸು ರಾಶಿ:  ಎಲ್ಲಾ ಶುಭಕಾರ್ಯಗಳಲ್ಲೂ ಸ್ವಲ್ಪ ಸಂದೇಹ, ಅತ್ಯಂತ ನಿಧಾನವಾದ ಪ್ರಗತಿ, ಉತ್ಸಾಹವಿಲ್ಲದಿದ್ದರೂ ಕಾರ್ಯಗಳಲ್ಲಿ ಮುನ್ನುಗ್ಗುವುದಕ್ಕೆ ಪ್ರಯತ್ನ, ಆಲೋಚನೆ ಇಲ್ಲ ನಿರಾಸಕ್ತಿ. (ಪರಿಹಾರಕ್ಕಾಗಿ ಸೂರ್ಯನಾರಾಯಣನ ಸ್ತೋತ್ರ ಪಾರಾಯಣ ಮಾಡಿ)

ಮಕರ ರಾಶಿ: ಕಾರ್ಯಗಳಲ್ಲಿ ಹಿನ್ನಡೆ, ತುಂಬಾ ಜಟಿಲವಾದ ಮಾನಸಿಕ ಸಮಸ್ಯೆಗಳು, ದೃಢವಲ್ಲದ ನಿರ್ಧಾರಗಳು, ಅತಿಯಾದ ಆಸೆ, ಬಯಕೆ, ಕಾಮನೆ, ದುಃಖ, ನಿರಾಶಕ್ತಿ, ಸ್ವಲ್ಪ ಕಷ್ಟದ ಪರಿಸ್ಥಿತಿ
(ಪರಿಹಾರಕ್ಕಾಗಿ ನವನಾಗ ಸ್ತೋತ್ರದ ಪಾರಾಯಣ ಮಾಡಿ)

ಕುಂಭ ರಾಶಿ: ಆರೋಗ್ಯ ಸಮಸ್ಯೆ, ಧನ ಲಾಭವಿಲ್ಲ, ಭಯ, ಆತಂಕ, ಅರ್ಧಂಬರ್ಧ ಕೆಲಸ ಎಂದು ಮನಸ್ಸಿನಲ್ಲಿ ಬೇಸರ, ನಿಶ್ಚಿತ ಕಾರ್ಯಕ್ಕಾಗಿ ಮನಸ್ಸಿನಲ್ಲಿ ತೊಳಲಾಟ, ನಾನಾ ಚಿಂತೆ, ಆಸರೆ ಬೇಕು ಎನಿಸುತ್ತಿದೆ. (ಪರಿಹಾರಕ್ಕಾಗಿ ಗಣಪತಿಯನ್ನು ಪೂಜಿಸಿ)

ಮೀನ ರಾಶಿ: ಸಹಿಷ್ಣುಗಳಾದರೆ ಅನುಕೂಲವಿರುವುದಿಲ್ಲ, ಸೋದರ ಸೋದರಿಯ ಜೊತೆ ಸಂಬಂಧ ಚೆನ್ನಾಗಿ ಇರಿಸಿಕೊಳ್ಳಬೇಕು. ಸ್ವಲ್ಪ ಕಷ್ಟವಾದರೂ ಎಲ್ಲ ಕಾರ್ಯವನ್ನು ಮಾಡಬೇಕು, ದುಃಖವನ್ನು ನಿವಾರಿಸಿಕೊಳ್ಳಿ, ಧೈರ್ಯದಿಂದ ಮುನ್ನುಗ್ಗಿ ಕಾರ್ಯವು ಶುಭವಾಗುತ್ತದೆ, ಯೋಚಿಸಿ, ಆತಂಕ ಬೇಡ. (ಪರಿಹಾರಕ್ಕಾಗಿ ಅಮ್ಮನವರನ್ನು ಪೂಜಿಸಿ ಶುಭವಾಗತ್ತದೆ)

ರಾಹುಕಾಲ: 3-00 PMರಿಂದ 4-30PM
ಗುಳಿಕಕಾಲ: 12-00 PM ರಿಂದ 1-30PM
ಯಮಗಂಡಕಾಲ: 9-00AMರಿಂದ 10-30AM

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ  ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಅಬಕಾರಿ ಹಗರಣದ ಬಗ್ಗೆ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಏನೂ ಮಾತನಾಡಿಲ್ಲ. ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ವಿರೋಧ ಪಕ್ಷದ ವೈಫಲ್ಯದ ಲಾಭಆಡಳಿತ ಪಕ್ಷಕ್ಕೆ ಸಿಕ್ಕಿದೆ ಎಂದು ಶಾಸಕ ಬಸನಗೌಡ

[ccc_my_favorite_select_button post_id="119407"]
ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಅಲ್ಲಿ ಇದ್ದಿದ್ದು ಕಣ್ಣು ಕೋರೈಸುತ್ತಿದ್ದ ಲೇಸರ್ ಬೆಳಕಿನ ಲೀಲೆ; ಅದರ ಝಗಮಗದ ನಡುವೆ ಹಿಂಬಾಗಿಲ ಮೂಲಕ ಕಾಣಿಸಿಕೊಂಡಿದ್ದು ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia). ಹಾಲ್ಬಣ್ಣದ ಈ ಚೆಲುವೆಯ ಸೌಂದರ್ಯಕ್ಕೆ ಮೆರುಗು ನೀಡಿದ್ದು

[ccc_my_favorite_select_button post_id="119304"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರೇಮಿಯೋರ್ವ ಆತ್ಮಹತ್ಯೆಗೆ (Suicide) ಶರಣಾಗಿರುವ (Crime) ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

[ccc_my_favorite_select_button post_id="119241"]
ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ನೆಲಮಂಗಲ ಹೆದ್ದಾರಿಯ ಜಿಂದಾಲ್ ಮೇಲ್ಸೇತುವೆ ಬಳಿ ಸಂಭವಿಸಿದ ಕೆಎಸ್ ಆರ್ ಟಿಸಿ ಬಸ್​​ (KSRTC Bus) ಮತ್ತು ಇಂಡಿಕ ಕಾರಿನ (Indica Car) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ದೊಡ್ಡಬಳ್ಳಾಪುರದ ಐವರು ಯುವಕರು

[ccc_my_favorite_select_button post_id="119422"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!