ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳ ಮೂಲಕ ವೈರಲ್ ಆಗುತ್ತಿದ್ದ ಬಿಗ್ ಬಾಸ್ ಸ್ಪರ್ಧಿ ಜಗದೀಶ್ (Jagdish) ಅವರ ಮೇಲೆ ನಾಲೈದು ಜನ ಹಲ್ಲೆ ಮಾಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಗದೀಶ್ ಹಾಗೂ ಅಪರಿಚಿತ ಗುಂಪಿನ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟವಾಗಿದೆ. ಕೆಲವರು ಈ ಸಂದರ್ಭದಲ್ಲಿ ಕೆಲವರು ಜಗದೀಶ್ ಅವರನ್ನು ಹೊಡೆಯದಂತೆ ತಡೆಯುವುದಕ್ಕೂ ಪ್ರಯತ್ನಪಟ್ಟಿದ್ದಾರೆ.
ಜಗದೀಶ್ ಅವರು ಕೂಡ ವ್ಯಕ್ತಿಯೋರ್ವನ ಟೀ ಶರ್ಟ್ ಹಿಡಿದು ತಳ್ಳಾಡಲಾಗಿದೆ. ಅಲ್ಲದೆ ಟೀ ಶರ್ಟ್ ಕಿತ್ತು ಹಾಕಲಾಗಿದ್ದು, ಕೆಲವರು ಜಗದೀಶ್‌ಗೆ ಏಟು ಕೊಟ್ಟಿದ್ದಾರೆ.
Clash between Lawyer Jagadish and people#Bbk11 pic.twitter.com/Ol40phiyKr
— 👑Che_ಕೃಷ್ಣ🇮🇳💛❤️ (@ChekrishnaCk) January 23, 2025
ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಜಗದೀಶ್ ಅವರು ಬೆಂಗಳೂರಿನ ಕೊಡಿಗೇಹಳ್ಳಿ ವ್ಯಾಪ್ತಿಯ ವಿರೂಪಾಕ್ಷಪುರ ಗೇಟ್ ಸಮೀಪದ ನಮ್ಮ ಮನೆಯ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿ ರೋಡ್ ಬ್ಲಾಕ್ ಆಗಿರುವ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದೆ.
ಈ ಭಾಗದಲ್ಲಿ ಅಣ್ಣಮ್ಮ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದರಿಂದ ನಾವು ಇರುವ ಏರಿಯಾದ ರಸ್ತೆ ಬ್ಲಾಕ್ ಆಗಿದೆ. ಇದರ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್ ಮಾಡಿದ್ದೆ. ಇದರಿಂದ ಕೆಲವರು ಹಲ್ಲೆ ಮಾಡಿದ್ದಾರೆ. ದೂರು ನೀಡಿದ್ದೇನೆ ಎಂದಿದ್ದಾರೆ.
ದರ್ಶನ್ ಅಭಿಮಾನಿಗಳ ಸಂಭ್ರಮ
ಈ ವಿಡಿಯೋವನ್ನು ನೋಡಿ ದರ್ಶನ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬಿಗ್ ಬಾಸ್ ಹೋಗುವ ಮುನ್ನ ದರ್ಶನ್ ಪರ ಮಾತನಾಡಿ, ನಂತರ ದರ್ಶನ್ ವಿರುದ್ಧ ನಾಲಿಗೆ ಹರಿಬಿಟ್ಟಿದಕ್ಕೆ ಸರಿಯಾಗಿಯೇ ಆಗಿದೆ ಎಂದು ದರ್ಶನ್ ಅಭಿಮಾನಿಗಳು ಲೇವಡಿ ಮಾಡಿದ್ದಾರೆ.