ಶಿವಮೊಗ್ಗ: ರಾಜ್ಯ ಬಿಜೆಪಿ (BJP) ಯಲ್ಲಿ ನಡೆಯುತ್ತಿರುವ ಬೆಳವಣಿಗೆ ನನಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸಂತೋಷವನ್ನು ತಂದಿಲ್ಲ ಎಂದು ಹೇಳುವ ಮೂಲಕ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಿಜೆಪಿ ಬಣ ಬಡಿದಾಟವನ್ನು ಒಪ್ಪಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಚುನಾವಣೆಗಳು ಬರುವ ಮುಂಚಿತವಾಗಿ ಕೇಂದ್ರದ ವರಿಷ್ಠರು ಇದನ್ನು ಗಮನಿಸಿಬೇಕು ಎಂಬ ಅಪೇಕ್ಷೆ ನನಗೂ ಇದೆ.
ರಾಜ್ಯ ಬಿಜೆಪಿ (BJP) ಯಲ್ಲಿ ನಡೆಯುತ್ತಿರುವ ಬೆಳವಣಿಗೆ ನನಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸಂತೋಷವನ್ನು ತಂದಿಲ್ಲ.
ವಿಶೇಷವಾಗಿ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಕೆಲ ಮುಖಂಡರು ಅಪಮಾನ ಮಾಡುವಂತೆ ಒಂದು ವರ್ಷ, ಎರಡು ವರ್ಷದಿಂದ ಮಾತನಾಡುತ್ತಿರುವುದು ಕಾರ್ಯಕರ್ತರು ನೊಂದಿದ್ದಾರೆ.
ಈ ನಿಟ್ಟಿನಲ್ಲಿ ಎಲ್ಲಾ ವಿಚಾರಗಳ ಕುರಿತು ಸರಿಪಡಿಸಬೇಕಾದ ಕೆಲಸ ಆಗಬೇಕಿದೆ. ಈ ವಿಚಾರವಾಗಿ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.
ಶ್ರೀ ರಾಮುಲು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಒಗ್ಗಟಾಗಲೆಂದು ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರು ಸಲಹೆ ನೀಡಿದ್ದಾರೆ. ನಮಗೂ ಶ್ರೀರಾಮುಲು ಬಗ್ಗೆ ಅಪಾರ ಗೌರವ ಇದೆ. ಅವರಿಗೆ ಮನವಿ ಮಾಡ್ತೇನೆ ಅಪಾರ್ಥಮಾಡಿಕೊಳ್ಳುವುದು ಬೇಡ ಎಂದರು.
ಇನ್ನೂ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿ, ಮೊನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಶೇ.90 ರಷ್ಟು ಹಿರಿಯರು ನನ್ನ ರಾಜ್ಯಾಧ್ಯಕ್ಷ ಸ್ಥಾನದ ನಿರ್ವಹಣೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೋರಾಟಗಾರ, ಮಾಜಿ ಸಿಎಂ ಯಡಿಯೂರಪ್ಪರಿಗೆ ಆಗ್ತಿರುವ ಅಪಮಾನದಿಂದ ಕಾರ್ಯಕರ್ತರು ನೊಂದಿದ್ದಾರೆ; ಬಿವೈ ವಿಜಯೇಂದ್ರ #Byvijayndra pic.twitter.com/fsyEMOKlBN
— Harithalekhani (@harithalekhani) January 23, 2025
ಐದಾರು ಮಂದಿ ನಾಯಕರಿಂದ ಹೊರತು ಪಡಿಸಿ, ಎಲ್ಲರೂ ರಾಜ್ಯಾಧ್ಯಕ್ಷರು ಚೆನ್ನಾಗಿ ಕೆಲಸ ಮಾಡ್ತಾ ಇದ್ದಾರೆ ಎಂದು ತಿಳಿಸಿದ್ದಾರೆ ಎಂದರು.