ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂ.ಎಸ್.ವಿ. (MSV) ಪಬ್ಲಿಕ್ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಸುಬ್ರಮಣ್ಯ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಇದೇ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿದ ಅವರು, “ಗಣ ರಾಜ್ಯೋತ್ಸವ” ಇದೊಂದು ರಾಷ್ಟ್ರೀಯ ಹಬ್ಬ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಸರ್ವಾನುಮತದಿಂದ ಈ ಗಣ ರಾಜ್ಯ ಪದ್ಧತಿಯನ್ನು ಜಾರಿಗೆ ತಂದರು. 1950 ಜನವರಿ 26 ರಿಂದ ಭಾರತ ದೇಶವು ಸ್ವತಂತ್ರ ಗಣರಾಜ್ಯವಾಯಿತು.
ಅಂದರೆ ಅದೊಂದು ಆಡಳಿತ ಪದ್ಧತಿ, ರಾಷ್ಟ್ರದ ಉನ್ನತ ಪದವಿ ಯೋಗ್ಯತೆಯುಳ್ಳ ಸಾಮಾನ್ಯ ಪ್ರಜೆಗಳಿಗೂ ದೊರಕುವಂತಿರಬೇಕು ಎಂಬುದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಮಾನತೆಯ ತತ್ವವಾಗಿತ್ತು. ಅಂತಹ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ದೇಶದ ಕಾನೂನುಗಳನ್ನು ನಾವೆಲ್ಲರೂ ಗೌರವಿಸಬೇಕೆಂದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ವಿವಿಧ ನೃತ್ಯ, ಗಾಯನ, ರಾಷ್ಟ್ರನಾಯಕರ ಛದ್ಮವೇಷ, ನಾಟಕ ಮಕ್ಕಳ ಪಥಸಂಚಲನ, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು.


ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆಮ್ಯ ಬಿ.ವಿ., ಉಪ ಪ್ರಾಂಶುಪಾಲರಾದ ಪ್ರತಿಮಾ ಪೈ, ಶಿಕ್ಷಕವೃಂದ, ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.