ಗದಗ; ರಾಮುಲು ಸುಮ್ಮನೆ ಇದ್ದರು ಎಂದು ಅವಮಾನಿಸಲು ಬಂದ್ರೆ.. ನಾವು ಮಾತಾಡೋದೆ ಯಾರ್ದೇನ್ ಮುಲಾಜಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು (Sriramulu) ಅವರು ಸಿಡಿದೆದ್ದಿದ್ದಾರೆ.
ಶ್ರೀರಾಮುಲು ಅವರ ಮನೆಗೆ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಇಂದು ಭೇಟಿ ಮಾಡಿ ರಹಸ್ಯ ಸಭೆ ನಡೆಸಿದರು.
ಬಳಿಕ ಪ್ರತಿಕ್ರಿಯೆ ನೀಡಿದ ರಾಮುಲು, ದೆಹಲಿಗೆ ಹೋಗಿ ಎಲ್ಲ ವಿಚಾರವನ್ನು ರಾಷ್ಟ್ರ ನಾಯಕರಿಗೆ ತಿಳಿಸುತ್ತೇನೆ. ರಾಮುಲು ಸುಮ್ಮನೆ ಇದ್ದರು ಎಂದು ಅವಮಾನಿಸಲು ಬಂದ್ರೆ.. ನಾನು ಮಾತಾಡೋದೆ ಯಾರ್ದೇನ್ ಮುಲಾಜಿಲ್ಲ.
ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಅಂತಾ ಸುಮ್ಮನಿದ್ದೆ ಅಷ್ಟೇ ಇನ್ಮುಂದೆ ನನ್ನನ್ನು ಕೆಣಕಿದರೆ, ಅಪಮಾನಿಸಿದರೆ ಸುಮ್ಮನೆ ಇರುವ ಪ್ರಶ್ನೆಯೇ ಇಲ್ಲ. ಬೀದಿಗೆ ಇಳಿದು ಮಾತನಾಡುತ್ತೇನೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಈ ಎಲ್ಲವೂ ಸರಿ ಹೋಗಬೇಕಾದರೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳಬೇಕು. ಹೀಗಾಗಿ ಭೇಟಿ ಮಾಡಿ ಎಲ್ಲವೂ ಹೇಳಿ ಬರುತ್ತೇನೆ.
ರಾಮುಲು ಪಕ್ಷ ಬಿಟ್ಟು ಹೋಗಲ್ಲ ಎಂಬ ಸಂಗತಿ ಇಡೀ ರಾಜ್ಯಕ್ಕೆ ಗೊತ್ತಿದೆ. ನನಗೆ ಪಕ್ಷ ಬಿಟ್ಟು ಹೋಗಬೇಕು ಅಂತಾ ಅನಿಸಿದರೆ ನನ್ನನ್ನು ಯಾರಾದರೂ ತಡೆಯೋಕೆ ಆಗುತ್ತಾ? ನನ್ನನ್ನು ಜೈಲಿಗೆ ಹಾಕುತ್ತಾರಾ? ಪಕ್ಷ ಬಿಡುವ ಮಾತು ನನ್ನ ಮನಸ್ಸಿಗೆ ಬಂದಿಲ್ಲವಷ್ಟೇ ಎಂದು ಹೇಳಿದರು.