ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಆರೂಢಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಪ್ರಸಿದ್ಧ ಆಸ್ಪತ್ರೆಗಳ ತಜ್ಞರ ವೈದ್ಯರಿಂದ ವಿವಿಧ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರವನ್ನು ದೊಡ್ಡಬಳ್ಳಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಶಾರದ ನಾಗ್‌ನಾಥ್ ಮತ್ತು ಗ್ರಾಪಂ ಅಧ್ಯಕ್ಷೆ ಗಂಗರಾಜಮ್ಮ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಆರೋಧ್ಯಾಧಿಕಾರಿ ಡಾ.ಶಾರದ ನಾಗ್‌ನಾಥ್, ದೊಡ್ಡಬಳ್ಳಾಪುರ ತಾಲೂಕಿನ ಗಡಿ ಗ್ರಾಮವಾದ ಆರೂಢಿ ವ್ಯಾಪ್ತಿಗೆ ಖ್ಯಾತ ಆಸ್ಪತ್ರೆಗಳ ತಜ್ಞರು ವೈದ್ಯರು ಬಂದು ಶಿಬಿರದಲ್ಲಿ ಭಾಗವಹಿಸಿರುವುದು ಪ್ರಶಂಸನೀಯ.
ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ತೆರಳಿ ಈ ಸೌಲಭ್ಯ ಪಡೆಯುವುದು ಕಷ್ಟಕರ ಎಂಬುದನ್ನು ಅರಿತು ಈ ಶಿಬಿರವನ್ನು ಡಾ.ಪ್ರವೀಣ್ ಹಾಗೂ ಸಿಬ್ಬಂದಿಗಳು ಕಾಳಜಿವಹಿಸಿ, ಆಯೋಜನೆ ಮಾಡಿದ್ದು, ಸಾರ್ವಜನಿಕರ ಸದುಪಯೋಗ ಪಡೆಯಲಿ ಎಂದರು.

ಈ ವೇಳೆ ಗ್ರಾಮಪಂಚಾಯಿತಿ ಸದಸ್ಯ ನವೀನ್, ಡಾ.ಪ್ರವೀಣ್, ಮುಖ್ಯಶಿಕ್ಷಕ ಸಿದ್ದರಾಮಪ್ಪ, ಕೆಸಿ ಜನರಲ್ ಆಸ್ಪತ್ರೆ, ಶ್ರೀ ಕೃಷ್ಣ ದೇವರಾಯ ದಂತ ಚಿಕಿತ್ಸಾಲಯ, ಶಾರದ ಐ ಕೇರ್‌ನ ತಜ್ಞ ವೈದ್ಯಕೀಯ ಸಿಬ್ಬಂದಿಗಳು ಹಾಜರಿದ್ದರು.