ವೇಲೆನ್ಸಿಯಾ: ಕಾರ್ ರೇಸಿಂಗ್ ವೇಳೆ ಹೊಂದಿರುವ ತಮಿಳು ನಟ ಅಜಿತ್ (Ajith) ಅವರು ಚೆಲಾಯಿಸುತ್ತಿದ್ದ ಕಾರು ಮತ್ತೆ ಅಪಘಾತಕ್ಕೀಡಾಗಿದೆ.
ಸ್ಪೇನ್‌ನ ವೇಲೆನ್ಸಿಯಾದಲ್ಲಿ ನಡೆಯುತ್ತಿರುವ ರೇಸಿಂಗ್ ಸ್ಪರ್ಧೆಯಲ್ಲಿ ಅಜಿತ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಜಿತ್ ಅವರು ರೇಸಿಂಗ್ ವೇಳೆ ಭಾಗವಹಿಸಿದ್ದ ವೇಳೆ ಒಂದು ತಿಂಗಳ ಅಂತರದಲ್ಲಿ ಇದು ಎರಡನೇ ಅಪಘಾತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಜಿತ್ ಕಾರು ಆಕ್ಸಿಡೆಂಟ್ ಆಗಿರುವ ದೃಶ್ಯ ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಅಜಿತ್ ಅವರ ಕಾರು ರೇಸಿಂಗ್ ಟ್ಯಾಕ್ ನಲ್ಲಿ ಭಯಾನಕವಾಗಿ ಪಲ್ಟಿ ಆಗಿರುವುದು ದಾಖಲಾಗಿದೆ
ವೇಲೆನ್ಸಿಯಾದಲ್ಲಿ ನಡೆದ ಪೋರ್ಷೆ ಸ್ಪಿಂಟ್ ಚಾಲೆಂಜ್ ರೇಸಿಂಗ್ ಈವೆಂಟ್‌ನಲ್ಲಿ ನಟ ಭಾಗವಹಿಸಿದ್ದರು. ತರುವಿನಲ್ಲಿ ಕಾರ್ ಸ್ಕಿಡ್ ಆದ ಪರಿಣಾಮ ಅಪಘಾತವಾಗಿದ್ದು, ನಟನಿಗೆ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ, ಪೋರ್ಚುಗಲ್‌ನಲ್ಲಿ ನಡೆದ ಕಾರು ರೇಸ್‌ನಲ್ಲಿ ಅಜಿತ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಅಲ್ಲಿ ಅಭ್ಯಾಸ ಮಾಡುತ್ತಿದ್ದಾಗ, ಅವರು ಅನಿರೀಕ್ಷಿತವಾಗಿ ಮತ್ತೊಂದು ಕಾರು ಅಪಘಾತಕ್ಕೆ ಸಿಲುಕಿದರು.
ಇದಕ್ಕೂ ಮೊದಲು, ದುಬೈ ರೇಸಿಂಗ್ ಕಾರ್ಯಕ್ರಮದಲ್ಲಿ ಅಜಿತ್ ಅವರ ಕಾರು ಅಪಘಾತಕ್ಕೀಡಾಗಿತ್ತು.