ಬೆಂಗಳೂರು; ಇಂದು ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ (CHAMPIONS TROPHY) ಪಂದ್ಯಾವಳಿಯಲ್ಲಿ ಕಿಂಗ್ ಕೊಹ್ಲಿ ಆಕರ್ಷಕ ಶತಕ, ಶ್ರೇಯಸ್ ಫಿಫ್ಟಿ ಆಟದಿಂದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಈ ಕುರಿತು ಟ್ವಿಟ್ ಮಾಡಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಶಹಬ್ಬಾಶ್ ಹುಡುಗ್ರಾ..
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ಹೃದಯಪೂರ್ವಕ ಅಭಿನಂದನೆಗಳು.
ಇದು ಇಡೀ ದೇಶವೇ ಹೆಮ್ಮೆಪಡುವ ಗೆಲುವಾಗಿದೆ. ವಿರಾಟ್ ಕೊಹ್ಲಿ ಅವರ ಶತಕದಾಟ, ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ರೋಮಾಂಚಕ ಅನುಭವ ನೀಡಿತು.
ಜೈಹೋ ಟೀಂ ಇಂಡಿಯಾ ಎಂದು ಡಿಸಿಎಂ ಬರೆದಿದ್ದಾರೆ.