ಜಬಲಪುರ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbhamela) ತೆರಳಿದ್ದ ಗೋಕಾಕ್‌ನ ನಾಲ್ವರು ಸೇರಿ ಆರು ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಜಬಲಪುರ ಜಿಲ್ಲೆಯ ಶಿವೊರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಯಾಗರಾಜ್ ದಿಂದ ಕ್ರೂಸರ್ ವಾಹನದಲ್ಲಿ ಜಬಲ ಪುರ್‌ಗೆ ತೆರಳುವಾಗ ಬೆಳಗ್ಗೆ 6 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ.
ಮೃತರನ್ನು ಬಾಲಚಂದ್ರ ಗೌಡರ (50), ವಿರುಪಾಕ್ಷ ಗುಮತಿ (61), ಬಸವ ರಾಜ್ ಕುರಟ್ಟಿ (63), ಬಸವರಾಜ್ ದೊಡಮನಿ(49),ಸುನೀಲ್ ಶೇಡ ಶ್ಯಾಳೆ(45), ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ನಿವಾಸಿ ಈರಣ್ಣ ಶೇಬಿನಕಟ್ಟಿ (27) ಎಂದು ತಿಳಿದು ಬಂದಿದೆ.
ಅಪಘಾತಕ್ಕೆ 26 ಜನ ಸಾವು
ಮಹಾ ಕುಂಭಮೇಳಕ್ಕೆ ಹೊರಟಿದ್ದ ಹಾಗೂ ಪುಣ್ಯಸ್ನಾನ ಮುಗಿಸಿ ಬರುತ್ತಿದ್ದ ರಾಜ್ಯದ ಒಟ್ಟು 26 ಭಕ್ತಾದಿಗಳು ಕಳೆದ 44 ದಿನಗಳಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಬಲಿಯಾದವರು ಬೆಳಗಾವಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗೆ ಸೇರಿದವರಾಗಿದ್ದಾರೆ.