ದೊಡ್ಡಬಳ್ಳಾಪುರ: ಸ್ನೇಹಿತನ ಮದುವೆಗೆ ತೆರಳಿದ್ದ ಗೆಳೆಯರು ಮರಳಿ ಬರುವಾಗ ತಾಲ್ಲೂಕಿನ ಕತ್ತಿಹೊಸಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳ್ಳಗ್ಗಿನ ಜಾವ ಸಂಭವಿಸಿದ್ದ ಕಾರು ಅಪಘಾತದಲ್ಲಿ ಒಬ್ಬ ಮೃತಪಟ್ಟಿರುವ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಗಂಭೀರವಾಗಿ ಮಹಮದ್ ಮಯೂನಿಸ್ (20 ವರ್ಷ) ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಐದು ಜನ ಗೆಳೆಯರು ಧಾರವಾಡ ಜಿಲ್ಲೆಯ ನವಲಗುಂದದಲ್ಲಿನ ಗೆಳೆಯನ ಮದುವೆಗೆ ಹೋಗಿ ಬರುವ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕತ್ತಿಹೊಸಹಳ್ಳಿ ಮೇಲು ಸೇತುವೆಯಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.
ಕಾರಿನಲ್ಲಿದ್ದ ಕಿಶೋರ್, ಯತೀಶ್ ಗಾಯಗೊಂಡಿದ್ದಾರೆ. ಚೇತನ್ ಮತ್ತು ವಿಶಾಲ್ ಸಣ್ಣ ಪುಟ್ಟ ಗಾಯವಾಗಿದ್ದು, ಪರಾಗಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ವೈರಲ್
ಕಾರು ಅಪಘಾತಕ್ಕೀಡಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಸಾಮಾನ್ಯ ವೇಗದಲ್ಲಿ ಸಾಗುತ್ತಿದ್ದ ಕಾರು, ರಸ್ತೆ ಅವೈಜ್ಞಾನಿಕ ನಿರ್ಮಾಣದ ಕಾರಣ ಕ್ಷಣ ಮಾತ್ರದಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಮೇಲೆ ಹತ್ತಿದೆ.
ನಂತರ ಹಲವು ಸುತ್ತು ಪಲ್ಟಿ ಹೊಡೆದ ವೇಳೆ ಕಾರಿನ ಮುಂಭಾಗದಲ್ಲಿದ್ದ ಇಬ್ಬರ ಕಾರಿಂದ ಮೇಲೆ ಹಾರಿ ರಸ್ತೆಗೆ ಅಪ್ಪಳಿಸಿ ಬಿದ್ದಿರುವುದು ಸೆರೆಯಾಗಿದೆ. ಅಲ್ಲದೆ ಕಾರಿನ ಚಕ್ರವೊಂದು ಕಿತ್ತು ಬಂದು ಮುಂದೆ ಸಾಗುವುದು ಕಾಣಬಹುದು.
ಇದನ್ನೂ ಓದಿ; Doddaballapura; ಕೌಟುಂಬಿಕ ಕಲಹ.. ಪತಿಯಿಂದ ಪತ್ನಿಯ ಹತ್ಯೆ..!