
ದೊಡ್ಡಬಳ್ಳಾಪುರ (Doddaballapura): ಅಪರಿಚಿತ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ತಾಲೂಕಿನ ಆಲಹಳ್ಳಿ ಮೇಲ್ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮೃತರನ್ನು ವಿದ್ಯಾನಗರ ನಿವಾಸಿ 55 ವರ್ಷದ ಚನ್ನಕೇಶವ ಎಂದು ಗುರುತಿಸಲಾಗಿದೆ.
ಮೃತರು ಕೆಸಿಪಿ ವೃತ್ತದ ಬಳಿಯಿಂದ ಮನೆಗೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದ್ದು, ದೇವನಹಳ್ಳಿ ಕಡೆಯಿಂದ ಬಂದ ಕ್ಯಾಂಟರ್ ನೊಂದಿಗೆ ಚಾಲಕ ಪರಿಯಾಗಿದ್ದಾನೆ.
ಮೃತರ ಮಡದಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						