ಕಾಕಿನಾಡ: ತನ್ನ ಇಬ್ಬರು ಮಕ್ಕಳು ಓದಿನಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣಕ್ಕೆ ಬೇಸತ್ತ ತಂದೆಯೋರ್ವ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ (Suicide) ಮಾಡಿಕೊಂಡಿರು ಘಟನೆ ಆಂದ್ರಪ್ರದೇಶದಲ್ಲಿ ವರದಿಯಾಗಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೇನಿಯ ವಾನಪಲ್ಲಿ ಚಂದ್ರಕಿಶೋರ್ ಅವರು ಕಾಕಿನಾಡ ಜಿಲ್ಲೆಯ ವಾಕಲಪುಡಿಯಲ್ಲಿರುವ ಒಎನ್‌ಜಿಸಿ ಕಚೇರಿಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ನಿನ್ನೆಯ ಹೋಳಿ ಹಬ್ಬದಂದು ಚಂದ್ರಕಿಶೋರ್ ತನ್ನ ಪತ್ನಿ ತನುಜಾ, ಇಬ್ಬರು ಮಕ್ಕಳಾದ 1ನೇ ತರಗತಿ ವಿದ್ಯಾರ್ಥಿ ಜೋಶಿಲ್ (7 ವರ್ಷ), ಯುಕೆಜಿ ವಿದ್ಯಾರ್ಥಿ ನಿಖಿಲ್ (6 ವರ್ಷ) ಅವರೊಂದಿಗೆ ಕಚೇರಿಗೆ ತೆರಳಿದ್ದರು.
ಬಳಿಕ ಮಕ್ಕಳಿಗೆ ಸಮವಸ್ತ್ರದ ಅಳತೆ ಕೊಡಿಸಲು ಟೈಲರ್ ಬಳಿ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿ ಪತ್ನಿಗೆ ಕಚೇರಿಯಲ್ಲೇ ಇರುವಂತೆ ಒಪ್ಪಿಸಿ ಮನೆಗೆ ತೆರಳಿದ್ದಾರೆ.
ಇಬ್ಬರು ಮಕ್ಕಳನ್ನು ಮನೆಗೆ ಕರೆದೊಯ್ದ ಚಂದ್ರಕಿಶೋರ್, ಮಕ್ಕಳ ಕಾಲು ಮತ್ತು ಕೈಗಳನ್ನು ಕಟ್ಟಿ, ನೀರು ತುಂಬಿದ ಬಕೆಟ್‌ಗಳಲ್ಲಿ ತಲೆಯನ್ನು ಮುಳುಗಿಸಿ, ತಾನೂ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
10 ನಿಮಿಷದಲ್ಲಿ ಬರಬೇಕಿದ್ದ ಪತಿ ಬಾರದೆ, ಫೋನ್ ಎತ್ತದ ಕಾರಣ ಸಹೋದ್ಯೋಗಿಗಳೊಂದಿಗೆ ತನುಜಾ ಮನೆಗೆ ತೆರಳಿದ್ದಾಳೆ.
చదువుల్లో వెనకబడ్డారని ఇద్దరు పిల్లలను చంపేసి తాను ఆత్మహత్య చేసుకున్న తండ్రి
— Telugu Scribe (@TeluguScribe) March 15, 2025
పశ్చిమ గోదావరి జిల్లా తాడేపల్లిగూడేనికి చెందిన వానపల్లి చంద్రకిశోర్ కాకినాడ జిల్లా వాకలపూడిలోని ONGC ఆఫీస్లో అసిస్టెంట్ అకౌంటెంట్గా పని చేస్తున్నాడు
హోలీ పండుగ సందర్భంగా చంద్రకిశోర్ తన భార్య తనూజను,… pic.twitter.com/4U4lx2Izg6
ಮನೆಯ ಕಿಟಕಿಯಿಂದ ಪತಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಲವಂತವಾಗಿ ಬಾಗಿಲು ತೆರೆದು ನೋಡಿದಾಗ ಮಕ್ಕಳಿಬ್ಬರೂ ಕೈಕಾಲು ಕಟ್ಟಿ, ತಲೆ ನೀರು ತುಂಬಿದ ಬಕೆಟ್‌ಗಳಲ್ಲಿ ಮುಳುಗಿ ಮೃತಪಟ್ಟಿರುವುದು ಕಂಡು ಬಂದಿದೆ.
ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತನ್ನ ಮಕ್ಕಳು ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ, ಓದಲು ಬರುತ್ತಿಲ್ಲ, ಅವರಿಗೆ ಭವಿಷ್ಯವಿಲ್ಲ, ಹೀಗಾಗಿ ಇಬ್ಬರು ಮಕ್ಕಳನ್ನು ಕೊಂದು ಸಾಯುತ್ತಿರುವುದಾಗಿ ಚಂದ್ರಕಿಶೋರ್ ಬರೆದಿರುವ ಸೂಸೈಡ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.