ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅಪಘಾತ (Accident) ಪ್ರಕರಣಗಳಿಗೆ ಕಡಿವಾಣವೇ ಇಲ್ಲವೇ ಎಂಬ ಪ್ರಶ್ನೆ, ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.
ರಾಜಕೀಯ ಪಕ್ಷಗಳ ಕೃಪಾಕಟಾಕ್ಷದಿಂದ ದೊಡ್ಡಬಳ್ಳಾಪುರಕ್ಕೆ ಯಾವ ದಿಕ್ಕಿನಿಂದ ಬಂದರು ದುಡ್ಡು ಕಟ್ಟಿಯೇ ಬರಬೇಕು (ಟೋಲ್ ನಿರ್ಮಾಣ) ಅಂದರೆ ದೊಡ್ಡಬಳ್ಳಾಪುರ ತಾಲೂಕನ್ನು ಟೋಲ್ ಸಂಸ್ಥೆಗಳು ಸುತ್ತುವರಿದಿವೆ. ಆದರೆ ಪ್ರಯಾಣಿಕರ ಜೀವಕ್ಕೆ ಮಾತ್ರ ಯಾವುದೇ ಗ್ಯಾರಂಟಿ ಇಲ್ಲವಾಗಿದೆ.
ಈ ಕುರಿತು ಕೆಲ ಮಾದ್ಯಮಗಳಲು, ಸಂಘ ಸಂಸ್ಥೆಗಳು ದನಿ ಎತ್ತಿದರೂ ಫಲಿತಾಂಶ ಮಾತ್ರ ಶೂನ್ಯ.
ಇದಕ್ಕೆ ಪೂರಕ ಎಂಬಂತೆ ಭಾನುವಾರ ರಾತ್ರಿ ಹೆದ್ದಾರಿ ರಸ್ತೆ ದಾಟುವಾಗ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಂಡಮಗೆರೆ ಮತ್ತು ಗೊಲ್ಲಹಳ್ಳಿ ನಡುವೆ ಭಾನುವಾರ ರಾತ್ರಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಕೋಲಾರ ಜಿಲ್ಲೆಯ ಕೊಂಡಿಪಲ್ಲಿ ಗ್ರಾಮದ 40 ವರ್ಷದ ವೆಂಕಟರಮಣ ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ ದೊಡ್ಡಬಳ್ಳಾಪುರದಲ್ಲಿರುವ ತೋಟವೊಂದರಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.