ದೊಡ್ಡಬಳ್ಳಾಪುರ: ತಾಲೂಕು ಹಂತದಲ್ಲಿ ಮಾ.21 ರಿಂದ ಏ.4 ರವರೆಗೆ ನಡೆಯಲಿರುವ 2024-25ನೇ ಸಾಲಿನ ಎಸ್‍ಎಸ್‍ಎಲ್‍ಸಿ (SSLC) ಪರೀಕ್ಷೆಗಳನ್ನು ತಾಲೂಕಿನ 14 ಕೇಂದ್ರಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳಂತೆ, ತಾಲೂಕು ಆಡಳಿತದ ಮಾರ್ಗದರ್ಶನದಲ್ಲಿ ಪಾರದರ್ಶಕತೆಯಿಂದ ಸುವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತಾಲೂಕಿನ ಪ್ರೌಢಶಾಲೆಗಳಿಂದ ಹೊಸದಾಗಿ ಬಾಲಕರು 1921 ಮತ್ತು ಬಾಲಕಿಯರು 1879 ಸೇರಿ ಒಟ್ಟು 3800 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ.
ಖಾಸಗಿಯಾಗಿ ಒಟ್ಟು -44 (ಗಂಡು-24 ಹೆಣ್ಣು-20) ಹಾಗೂ ಪುನಾವರ್ತಿತ ವಿದ್ಯಾರ್ಥಿಗಳು -99 (ಗಂಡು-75 ಹೆಣ್ಣು-24) ಒಟ್ಟಾರೆ ತಾಲೂಕಿನಲ್ಲಿ ಗಂಡು-2020 ಹೆಣ್ಣು- 1923 ಸೇರಿದಂತೆ ಒಟ್ಟು 3943 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡು ಪರೀಕ್ಷೆ ಬರೆಯಲಿದ್ದಾರೆ.
ತಾಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದು, ಪರೀಕ್ಷೆಗೆ ಸಕಲ ಸಿದ್ಧತೆಯನ್ನು ಮಾಡಿ ಕೊಳ್ಳಲಾಗಿದೆ ಇದರಲ್ಲಿ ನಗರ ವ್ಯಾಪ್ತಿ-05 ಗ್ರಾಮೀಣ-09 ಕೇಂದ್ರಗಳಿವೆ.
ಎಲ್ಲಾ 14 ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ಜಿಲ್ಲಾ ಪಂಚಾಯತ್ ಸಿಇಒ ಕಚೇರಿಯಲ್ಲಿನ ಇಯಂತ್ರಣ ಕೊಠಡಿಯಿಂದ ನಿಯಂತ್ರಿಸಲಾಗುತ್ತಿದೆ.
ಪರೀಕ್ಷೆ ನಡೆಯುವ ಕೇಂದ್ರದ 200ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಜೊತೆಗೆ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಪರೀಕ್ಷಾ ದಿನಗಳಂದು ಬೆಳಿಗ್ಗೆ 9 ರಿಂದ ಮದ್ಯಾಹ್ನ 3 ಗಂಟೆಯವರೆಗೆ ಯಾವುದೇ ರೀತಿಯ ಎಸ್.ಟಿ.ಡಿ, ಜೆರಾಕ್ಸ್ ಟೈಪಿಂಗ್ ಮುಂತಾದವುಗಳನ್ನು ತೆರೆಯಲು ನಿಷೇಸಿದೆ ಪರೀಕ್ಷಾ ಕೇಂದ್ರಗಳಿಗೆ ಅನಕೃತ ವ್ಯಕ್ತಿಗಳ ಆಥವಾ ಗುಂಪು ಸೇರದಂತೆ ಪೊಲೀಸ್ ರಕ್ಷಣೆ ಪಡೆಯಲಾಗಿದೆ.
ಪರೀಕ್ಷೆ ಸುಗಮವಾಗಿ ನಡೆಯಲು ಬೆಸ್ಕಾಂ, ಪೊಲೀಸ್, ಆರೋಗ್ಯ, ಖಜಾನೆ, ಕಂದಾಯ,ಸಾರಿಗೆ ಸೇರಿದಂತೆ ಇತರ ಇಲಾಖೆಗಳ ಸಹಾಯ ಪಡೆಯಲಾಗಿದೆ.
ಪರೀಕ್ಷಾ ಕಾರ್ಯಕ್ಕಾಗಿ ಮಾರ್ಗಾಧಿಕಾರಿಗಳು, ಮೊಬೈಲ್ ಸ್ವಾಧೀನಾಧಿಕಾರಿಗಳು, ಸ್ಥಾನಿಕ ಜಾಗೃತದಳ, ವಿಚಕ್ಷಣ ದಳಗಳಿಗೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳನ್ನು ನೇಮಿಸಲಾಗಿದೆ.
ಪರೀಕ್ಷಾ ವೇಳಾಪಟ್ಟಿ
ಬೆಳಿಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಪರೀಕ್ಷೆಗಳು ನಡೆಯಲಿವೆ.
ಮಾ.21-ಪ್ರಥಮಭಾಷೆ (ಕನ್ನಡ), ಮಾ.24-ಗಣಿತ, ಮಾ.26-ಇಂಗ್ಲೀಷ್, ಮಾ.29-ಸಮಾಜ ವಿಜ್ಞಾನ, ಏ.2-ವಿಜ್ಞಾನ, ಏ.4-ತೃತೀಯ ಭಾಷೆ (ಹಿಂದಿ)
ಪರೀಕ್ಷಾ ಕೇಂದ್ರಗಳು
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಂಗಾಡಿಯಪ್ಪ ಪ್ರೌಢಶಾಲೆ, ದೊಡ್ಡಬೆಳವಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕನಸವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಲಿಕುಂಟೆಯ ಸರ್ಕಾರಿ ಪ್ರೌಢಶಾಲೆ, ತೂಬಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಕಾಡನೂರು ಕೈಮರದ ಶ್ರೀರಾಮ ಪ್ರೌಢಶಾಲೆ.
ಚೆನ್ನವೀರನಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಹೊಸಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಶ್ರೀ ದೇವರಾಜ ಅರಸು ಪ್ರೌಢಶಾಲೆ, ಕಾರ್ಮಲ್ ಜ್ಯೋತಿ ಪ್ರೌಢಶಾಲೆ, ಅರಳು ಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆ, ಬಾಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಮೆಳೇಕೋಟೆ ಕ್ರಾಸ್‍ನ ಎಸ್‍ಜೆಸಿಆರ್ ಪ್ರೌಢಶಾಲೆ.