Daily story Maharana Pratapa

ಹರಿತಲೇಖನಿ ದಿನಕ್ಕೊಂದು ಕಥೆ: ಮಹಾರಾಣಾ ಪ್ರತಾಪ

Daily story: ಭಾರತದ ಇತಿಹಾಸದಲ್ಲಿ ರಾಜಸ್ಥಾನದ ಶೂರವೀರ ಮತ್ತು ಸ್ವಾಭಿಮಾನಿ ರಾಜರಾಗಿದ್ದ ಮಹಾರಾಣಾ ಪ್ರತಾಪರ ಹೆಸರು ಅಜರಾಮರವಾಗಿದೆ.

ಜಯಪುರದ ರಾಣಾ ಮಾನಸಿಂಗನು ಅಕ್ಬರನಿಂದ ರಾಜ್ಯಕ್ಕೆ ಕಷ್ಟವಾಗಬಾರದೆಂದು ತನ್ನ ತಂಗಿಯನ್ನು ಅಕಬರನಿಗೆ ಕೊಟ್ಟು ಮದುವೆ ಮಾಡಿದನು. ಒಂದು ಸಲ ತನ್ನ ವೈಭವವನ್ನು ಪ್ರದರ್ಶಿಸಲು ರಾಣಾ ಮಾನಸಿಂಗನು ದೆಹಲಿಗೆ ಹೋಗುವಾಗ ದಾರಿಯಲ್ಲಿ ಮಹಾರಾಣಾ ಪ್ರತಾಪರನ್ನು ನೋಡಲು ಕುಂಭಲಗಢಕ್ಕೆ ಹೋದನು.

ಮಹಾರಾಣಾ ಪ್ರತಾಪರು ಅವರೆಲ್ಲರನ್ನು ಯೋಗ್ಯವಾಗಿ ಸತ್ಕರಿಸಿದರು ಆದರೆ ಜೊತೆಯಲ್ಲಿ ಕುಳಿತು ಊಟ ಮಾಡುವುದಿಲ್ಲ ಎಂದು ತಿಳಿಸಿದರು.

ಏಕೆ ಜೊತೆಯಲ್ಲಿ ಊಟ ಮಾಡುವುದಿಲ್ಲವೆಂದು ರಾಣಾ ಮಾನಸಿಂಗನು ಕೇಳಿದಾಗ ಮಹಾರಾಣಾ ಪ್ರತಾಪರು ಹೇಳುತ್ತಾರೆ, “ರಾಜ್ಯವನ್ನು ಉಳಿಸಿಕೊಳ್ಳಬೇಕೆಂಬ ಕಾರಣದಿಂದ ತನ್ನ ಮನೆಯ ಹೆಣ್ಣು ಮಕ್ಕಳನ್ನು ಮೊಗಲರಿಗೆ ಮದುವೆ ಮಾಡಿಕೊಟ್ಟಂತಹ ಸ್ವಾಭಿಮಾನ ಶೂನ್ಯ ರಾಜಪೂತನೊಂದಿಗೆ ನಾನು ಕುಳಿತು ಊಟ ಮಾಡುವುದಿಲ್ಲ”.

ಮಹಾರಾಣಾ ಪ್ರತಾಪರ ಉತ್ತರವನ್ನು ಕೇಳಿ ಮಾನಸಿಂಗನು ಕೋಪದಿಂದು ಊಟದ ತಟ್ಟೆಯನ್ನು ಅರ್ಧದಲ್ಲಿಯೇ ಬಿಟ್ಟು ಎದ್ದನು ಮತ್ತು ಹೇಳಿದನು, “ಮಹಾರಾಣಾ ಪ್ರತಾಪ! ಯುದ್ಧದಲ್ಲಿ ನಿನ್ನ ಸರ್ವನಾಶ ಮಾಡದಿದ್ದರೆ ನನ್ನ ಹೆಸರು ಮಾನಸಿಂಗನೇ ಅಲ್ಲ!”

ಸ್ವಲ್ಪ ಸಮಯದ ನಂತರ ಮಾನಸಿಂಗನು, ಅಕಬರನ ಮಗ ಸಲೀಂ ಮತ್ತು ಪ್ರಚಂಡ ಸೈನ್ಯದೊಂದಿಗೆ ಮಹಾರಾಣಾ ಪ್ರತಾಪರ ಮೇಲೆ ಯುದ್ಧಕ್ಕಾಗಿ ಹೊರಟನು.

ಸುದ್ದಿ ತಿಳಿದ ಕೂಡಲೇ ಮಹಾರಾಣಾ ಪ್ರತಾಪನು ತತ್ಪರತೆಯಿಂದ ಅರಾವಲಿ ಪರ್ವತದ ಮೇಲಿಂದ ಕೆಳಗೆ ಬರುತ್ತಿದ್ದ ಶತ್ರು ಸೈನ್ಯದ ಮೇಲೆ ದಾಳಿ ಮಾಡಿ ಅವರ ಅಧಿಕಾಂಶ ಸೈನಿಕರನ್ನು ಮಣ್ಣುಪಾಲು ಮಾಡಿದರು. ಮಹಾರಾಣಾ ಪ್ರತಾಪರ ಕತ್ತಿಯಿಂದ ಸಲೀಂನ ವಧೆಯಾಗಬೇಕಿತ್ತು ಆದರೆ ಆ ಹೊಡೆತವು ಸಲೀಂನ ಆನೆಗೆ ಬಿತ್ತು ಮತ್ತು ಸಲೀಂನು ಉಳಿದನು.

ಮಹಾರಾಣಾ ಭಯದಿಂದ ಮಾನಸಿಂಗನು ಸೈನ್ಯದ ಹಿಂದೆ ಅವಿತುಕೊಂಡಿದ್ದನು. ಮಹಾರಾಣಾ ಪ್ರತಾಪನು ತನ್ನ ಹೊಳೆಯುವ ಕತ್ತಿಯ ಸಹಾಯದಿಂದ ಶತ್ರುಗಳ ಜಾಲದಿಂದ ಹೊರಬರಲು ಪ್ರಯತ್ನಿಸುತ್ತಿದ್ದನು. ಅಷ್ಟರಲ್ಲೇ ಶತ್ರುಸೈನಿಕರ ಹೊಡೆತದಿಂದ ಮಹಾರಾಣಾ ಪ್ರತಾಪರ ಕುದುರೆ ‘ಚೇತಕ’ನ ಕಾಲಿಗೆ ಪೆಟ್ಟಾಯಿತು.

ಇಂತಹ ಸ್ಥಿತಿಯಲ್ಲೂ ಸಹ ಆ ಸ್ವಾಮಿನಿಷ್ಟ ಕುದುರೆಯು ತನ್ನ ಸ್ವಾಮಿಯ ಪ್ರಾಣವನ್ನು ಉಳಿಸಲು ಶತ್ರುಗಳ ಜಾಲದಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಅಷ್ಟರಲ್ಲೇ ದಾರಿಯಲ್ಲಿ ಒಂದು ಸಣ್ಣನದಿ ಎದುರಾಯಿತು. ಚೇತಕ ಆ ಸ್ಥಿತಿಯಲ್ಲೇ ತನ್ನ ಎಲ್ಲಾ ಶಕ್ತಿಯನ್ನು ಸೇರಿಸಿ ಒಂದೇ ಜಿಗಿತಕ್ಕೆ ನದಿಯನ್ನು ದಾಟಿತು, ಆದರೆ ಹೃದಯ ಬಡಿತವು ನಿಂತಿದ್ದರಿಂದ ಚೇತಕ ಅಲ್ಲೇ ಪ್ರಾಣ ಬಿಟ್ಟಿತು.

ಮಹಾರಾಣಾ ಪ್ರತಾಪರು ಹಿಂದೆ ತಿರುಗಿ ನೋಡಿದಾಗ ಅಕಬರನ ಸೈನ್ಯದಲ್ಲಿ ಸೇರಿದ್ದ ಅವನ ತಮ್ಮ ಶಕ್ತಿಸಿಂಗನು ನಾಲ್ಕು-ಐದು ಮೊಗಲ ಸೈನಿಕರನ್ನು ಹೊಡೆಯುತ್ತಿದ್ದನು. ಇದನ್ನು ನೋಡಿ ಮಹಾರಾಣಾ ಪ್ರತಾಪರು ಆಶ್ಚರ್ಯಚಕಿತರಾದರು.

ಅಷ್ಟರಲ್ಲೇ ಆ ಸೈನಿಕರನ್ನು ಸಾಯಿಸಿದ ಶಕ್ತಿಸಿಂಗನು ಮಹಾರಾಣಾ ಪ್ರತಾಪರ ಬಳಿಗೆ ಬಂದು ಅವರನ್ನು ಆಲಂಗಿಸಿಕೊಂಡು, “ಅಣ್ಣಾ, ನಾನು ಮೊಗಲರ ಸೈನ್ಯದಲ್ಲಿದ್ದೀನಿ, ಆದರೆ ನಿಮ್ಮ ಶೌರ್ಯ, ಪರಾಕ್ರಮದಿಂದ ನೀವೇ ನನ್ನ ಆದರ್ಶರಾಗಿದ್ದೀರಿ. ನಾನು ನಿಮ್ಮ ಕುದುರೆಗಿಂತಲೂ ತುಚ್ಛವಾಗಿದ್ದೇನೆ.”

ಮೇವಾಡದ ಇತಿಹಾಸವನ್ನು ಬರೆದ ಕರ್ನಲ್ ಟಾಂಡ್ ಮಹಾರಾಣಾಾ ಪ್ರತಾಪರ ಬಗ್ಗೆ ಹೇಳುತ್ತಾ, “ಉತ್ಕಟ ಮಹತ್ವಾಕಾಂಕ್ಷಿ, ಶಾಸನ ನಿಪುಣತೆ ಮತ್ತು ಅಪರಿಮಿತ ಸಂಪತ್ತಿನ ಬಲದಿಂದ ಅಕಬರನು ದೃಢ ನಿಶ್ಚಯಿ, ಧೈರ್ಯಶಾಲಿ, ಉಜ್ವಲ ಕೀರ್ತಿಮಾನ ಮತ್ತು ಸಾಹಸಿ ಮಹಾರಾಣಾ ಪ್ರತಾಪರ ಆತ್ಮಬಲವನ್ನು ಬೀಳಿಸಲು ಪ್ರಯತ್ನಿಸಿದನು, ಆದರೆ ಅದು ವಿಫಲವಾಯಿತು”.

ಕೃಪೆ: ಹಿಂದೂ ಜಾಗೃತಿ.

ರಾಜಕೀಯ

ರಾಜಘಟ್ಟದಲ್ಲಿ ಬೀದಿಗೆ ಬಂದ ಜೆಡಿಎಸ್ ಮುಖಂಡರ ಒಳಜಗಳ..!

ರಾಜಘಟ್ಟದಲ್ಲಿ ಬೀದಿಗೆ ಬಂದ ಜೆಡಿಎಸ್ ಮುಖಂಡರ ಒಳಜಗಳ..!

ಜೆಡಿಎಸ್ (JDS) ಮುಖಂಡರ ಒಳಜಗಳ ರಾಜಘಟ್ಟ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದಲ್ಲಿನ ಅರಳಿಕಟ್ಟೆಯಲ್ಲಿ ಬೀದಿಗೆ ಬಂದಿದೆ.

[ccc_my_favorite_select_button post_id="118288"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್ ಕುಮಾರಸ್ವಾಮಿ

ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್

ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ (NDA) ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಆ ನಿಟ್ಟಿನಲ್ಲಿ ಎರಡೂ ಪಕ್ಷಗಳು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

[ccc_my_favorite_select_button post_id="118301"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಗೆ ಗಂಭೀರ ಗಾಯ

ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ (Accident) ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ **** ಹಾಗೂ *** ನಡುವೆ ಸಂಭವಿಸಿದೆ.

[ccc_my_favorite_select_button post_id="118304"]

ಆರೋಗ್ಯ

ಸಿನಿಮಾ

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕ ಪ್ರಕಾಶ್ ರಾಜ್ (Prakash Raj) ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ (Brand Ambassador) ಆಗಿ ನೇಮಿಸಲಾಗಿದೆ.

[ccc_my_favorite_select_button post_id="117722"]
error: Content is protected !!