ದೊಡ್ಡಬಳ್ಳಾಪುರ (Doddaballapura): ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಜಿಂಕೆಯೊಂದು ಸ್ಥಳದಲ್ಲೇ ಸಾವನ್ನಪಿರುವ ಘಟನೆ ನೆಲಮಂಗಲ ರಸ್ತೆಯ ಆಕಾಶವಾಣಿ ಪ್ರಸಾರ ಕೇಂದ್ರ ಬಳಿ ಸಂಭವಿಸಿದೆ.
ಶುಕ್ರವಾರ ರಾತ್ರಿ ಸುಮಾರು 4 ವರ್ಷ ಪ್ರಾಯದ ಗಂಡು ಜಿಂಕೆಯೊಂದು ದೊಡ್ಡಬಳ್ಳಾಪುರ-ನೆಲಮ ರಸ್ತೆ ದಾಟುವ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದೆ
ಇಂದು ಬೆಳಗ್ಗೆ ಜಿಂಕೆ ರಸ್ತೆ ಬದಿಯಲ್ಲಿ ಸತ್ತುಬಿದ್ದಿರುವುದ ಕಂಡ ಸ್ಥಳೀಯರು, ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.