ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ (honeytrap) ವಿಚಾರ ದೊಡ್ಡ ಸದ್ದು ಮಾಡುತ್ತಿದ್ದು, ಪ್ರತಿಭಟನೆ ವೇಳೆ ಅತಿರೇಕದ ವರ್ತನೆ ಆರೋಪದ ಅಡಿಯಲ್ಲಿ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ.
ಮತ್ತೊಂದೆಡೆ ಹನಿಟ್ರ್ಯಾಪ್ ಕಹಾನಿಗೆ ಹೊಸ ತಿರುವು ಸಿಕ್ಕಿದ್ದು, ಸಚಿವ ರಾಜಣ್ಣ ಹಾಗೂ ಪುತ್ರ ರಾಜೇಂದ್ರ ವಿರುದ್ಧ ಗುಬ್ಬಿ ಶ್ರೀನಿವಾಸ್ ಬೆಂಬಲಿಗರು ಲೇವಡಿ ಮಾಡಿದ್ದಾರೆ.
ಗುಬ್ಬಿ ಶ್ರೀನಿವಾಸ್ ಬೆಂಬಲಿಗರ ಫೇಸ್‌ಬುಕ್ ಪೇಜ್ ಒಂದರಲ್ಲಿ ರಾಜಣ್ಣ ಕುಟುಂಬದ ಕಾಲೆಳೆದಿದ್ದು, ಸಚಿವ ಹಾಗೂ ಪುತ್ರನ ವಿರುದ್ಧ ಪೋಸ್ಟ್ ಮಾಡಿ ವ್ಯಂಗ್ಯ ಮಾಡಲಾಗಿದೆ.

ಗುಬ್ಬಿ ಶ್ರೀನಿವಾಸ್ ಬೆಂಬಲಿಗರು ಪೋಸ್ಟ್‌ನಲ್ಲಿ ಸಚಿವ ಕೆ.ಎನ್.ರಾಜಣ್ಣ ಮತ್ತು ಅವರ ಪುತ್ರ ರಾಜೇಂದ್ರ ಅವರನ್ನು ಗುರಿಯಾಗಿಸಿ ಟಾಂಗ್ ಕೊಡಲಾಗಿದೆ.
“ಹೊಸ ಕಥೆ ಕಟ್ಟಿದ ಅಪ್ಪ ಮತ್ತು ಮಗ.. ಹನಿಟ್ರ್ಯಾಪ್ ಅಲ್ಲ, ಅದು ಮಂತ್ರಿಯ ಓಲ್ಡ್ ಸೆಟಪ್..! ಮಡಿಕ್ಕಂದಿದ್ದವಳನ್ನೇ ಹಿಡಿದು ರುಬ್ಬಿತ್ತು ಮಂತ್ರಿ ಫ್ಯಾಮಿಲಿ..! DK ಹತ್ರ ಹೋಗ್ತಿನಿ ಅಂದ್ಲು ಲೇಡಿ..! ಆ ಕ್ಷಣವೇ ರೆಡಿ ಹನಿಟ್ರ್ಯಾಪ್ ಕಹಾನಿ” ಎಂದು ಲೇವಡಿ ಮಾಡಲಾಗಿದೆ. ಇದರ ಜೊತೆಗೆ, “ಹಾಗಿದ್ರೆ ವಿಡಿಯೋ ಶೀಘ್ರದಲ್ಲೇ ತೆರೆಗೆ..?” ಎಂಬ ಟ್ಯಾಗ್‌ಲೈನ್ ಸೇರಿಸಿ ಟಾಂಗ್ ನೀಡಲಾಗಿದೆ.
ಸದ್ಯ ಈ ಪೋಸ್ಟ್ ದೊಡ್ಡ ಸಂಚಲನ ಸೃಷ್ಟಿಸಿದ್ದು ಹನಿಟ್ರ್ಯಾಪ್ ವಿಚಾರ ಮತ್ತೊಂದು ದಿಕ್ಕಿಗೆ ಸಾಗಿದ್ದು, ಆರೋಪ ಮಾಡಿದವರ ಬುಡಕ್ಕೆ ಬಿಸಿ ತಟ್ಟಬಹುದು ಎನ್ನಲಾಗುತ್ತಿದೆ.