ದೊಡ್ಡಬಳ್ಳಾಪುರ (Doddaballapura): ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಜಖಂಗೊಂಡಿರುವ ಘಟನೆ ತಾಲೂಕಿನ ಮಧುರೆ ಕೆರೆ ಏರಿ ಮೇಲೆ ನಡೆದಿದೆ.
ಮಂಗಳೂರು ಮೂಲದ ದಂಪತಿಗಳು, ಮಗುವಿನೊಂದಿಗೆ ಕಾರಿನಲ್ಲಿ ತೆರಳುವ ವೇಳೆ ಮಧುರೆ ಕೆರೆ ಕಟ್ಟೆಯ ಮೇಲೆ ನಿಯಂತ್ರಣ ತಪ್ಪಿ ರಸ್ತೆ ನಡುವಿನ ಡಿವೈಡರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಘಟನೆಯಲ್ಲಿ ಕಾರು ಜಖಂ ಗೊಂಡಿದ್ದು, ಚಾಲಕನ ಕೈಗೆ ಪೆಟ್ಟಾಗಿದ್ದರೆ, ಮಹಿಳೆ ಮತ್ತು ಮಗು ಪಾರಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.