ಚಿಕ್ಕಬಳ್ಳಾಪುರ: ಕಲ್ಲು ಕ್ವಾರಿ ಮತ್ತು ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದರಿಂದ ಕುಪಿತನಾದ ಕಲ್ಲು ಕ್ವಾರಿ ಮಾಲೀಕ ಸಕಲೇಶಕುಮಾರ್ ಎಂಬುವರು ಗುಂಡು ಹಾರಿಸಿದ್ದು, ಚಿಕನ್ ರವಿ ಎಂಬುವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕನಗಾನ ಕೊಪ್ಪ ಗ್ರಾಮದ ಹೊರ ವಲಯದಲ್ಲಿ ಬುಧವಾರ ಈ ಘಟನೆ ನಡೆದಿದ್ದು ಸಕಲೇಶಕುಮಾರ್‌ನನ್ನು ಮಂಚೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕ್ವಾರಿಗಾಗಿ ಸರ್ಕಾರಿ ಜಾಗದಲ್ಲಿ ದಾರಿ ಮಾಡಲು ಟ್ರಾಕ್ಟರ್‌ಗಳಲ್ಲಿ ಮಣ್ಣು ಹೊಡೆಯುತ್ತಿದ್ದರು.
ಆಗ ಕನಗಾನಕೊಪ್ಪ ಗ್ರಾಮದ ಜನ ಪ್ರತಿಭಟನೆ ನಡೆಸಿ ಕಲ್ಲು ತೂರಾಟ ನಡೆಸಿದರು. ಇದರಿಂದ ಸಕಲೇಶಕುಮಾರ್ ತಲೆಗೆ ಗಾಯವಾಗಿದೆ. ನಂತರ ಅವರು ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದು, ರವಿ ಎಂಬುವರ ತೊಡೆಗೆ ಗುಂಡು ತಗುಲಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಹಾಗೂ ತಹಸೀ ಲ್ದಾರ್ ದೀಪ್ತಿ ಎನ್.ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಸಕಲೇಶ ಕುರ್ಮಾನನ್ನು ಮಂಚೇನಹಳ್ಳಿ ಠಾಣೆ ಪೊಲೀ ಸರು ಬಂಧಿಸಿದ್ದಾರೆ.
ಸಕಲೇಶ ಕುಮಾರ್‌ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಚೇನಹಳ್ಳಿ ಪೊಲೀಸ್ ಠಾಣೆ ಮುಂದೆ ಸ್ಥಳಿಯರು ಪ್ರತಿಭಟನೆ ನಡೆಸಿದ್ದಾರೆಂದು ವರದಿಯಾಗಿದೆ.