Forces that commit violence in the name of religion have arisen: Basavaraja Bommai is upset

ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವ ಶಕ್ತಿಗಳು ಹುಟ್ಟಿಕೊಂಡಿವೆ: ಬಸವರಾಜ ಬೊಮ್ಮಾಯಿ ಬೇಸರ

ಬೆಂಗಳೂರು: ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಅಂತ ಒಂದೇ ಪದದಲ್ಲಿ ಹೇಳಿದ್ದಾರೆ. ಆದರೆ, ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವ ಶಕ್ತಿಗಳು ಹುಟ್ಟಿಕೊಂಡಿವೆ. ಬಸವಣ್ಣನ ತತ್ವ ಪಾಲಿಸಿದರೆ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ ಬೆಂಗಳೂರು ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವಣ್ಣ ಒಬ್ಬ ವಿಸ್ಮಯ ವ್ಯಕ್ತಿ. ಯಾರಾದರು ಬಸವಣ್ಣನನ್ನು ಪರಿಪೂರ್ಣ ವಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರೆ ಆ ವ್ಯಕ್ತಿಗೆ ಇನ್ನೂ ಪರಿಪೂರ್ಣತೆ ಬಂದಿಲ್ಲ ಎಂದರ್ಥ. ಬಸವಣ್ಣ ಅಂದಿಗೂ ಪ್ರಸ್ತುತ ಇಂದಿಗೂ ಪ್ರಸ್ತುತ. ಒಂದು ಆಯಾಮದಲ್ಲಿ ಅವನು ಆಗಿನ ವಾಸ್ತವದ ಬಗ್ಗೆ ಮಾತನಾಡಿದ್ದರು.

ಇನ್ನೊಂದು ಆಯಾಮದಲ್ಲಿ ಬಸವಣ್ಣ ಅಸಮಾನತೆ, ತಾರತಮ್ಯದ ವಿರುದ್ದ ಮಾತನಾಡಿದ್ದರು. ಅವು ಇಂದಿಗೂ ಜೀವಂತವಾಗಿವೆ ಎಂದರೆ ಸಂತೋಷ ಪಡುವ ವಿಷಯವಲ್ಲ. ಇವತ್ತು ನಮ್ಮ ಸಮಾಜದಲ್ಲಿ ನಡೆಯುತ್ತಿರುವದನ್ನು ನೋಡಿದಾಗ ಬಸವಣ್ಣನವರ ಚಿಂತನೆಗೆ ನಾವು ಎಷ್ಟು ಗೌರವ ಕೊಟ್ಟಿದ್ದೇವೆ ಎನ್ನುವುದು ಅರಿವಿಗೆ ಬರುತ್ತದೆ ಎಂದರು.

ಸಮಾಜದಲ್ಲಿ ಮೂರು ಥರದ ವ್ಯಕ್ತಿಗಳು ಇರುತ್ತಾರೆ. ಕೆಲವರು ಭೂತಕಾಲದ ಬಗ್ಗೆ ಮಾತನಾಡುತ್ತಾರೆ. ಅವರು ವಾಸ್ತವದ ಬಗ್ಗೆ ಮಾತನಾಡುವುದೇ ಇಲ್ಲ. ಎರಡನೇಯವರು ಕ್ರಾಂತಿಕಾರಿಗಳಾಗಿರುತ್ತಾರೆ. ಶರಣರ ಕ್ರಾಂತಿ, ಸ್ವಾತಂತ್ರ್ಯ ಹೋರಾಟ, ರಷ್ಯನ್‌ಕ್ರಾಂತಿ ಯಾಕೆ ಬಹಳ ದಿನ ಉಳಿಯಲಿಲ್ಲ. ಆ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಲು ನಾವು ವಿಫಲರಾಗಿದ್ದೇವೆ. ಬಸವಣ್ಣ ಕ್ರಾಂತಿ ಕಾರಿ ಅಂತ ಹೇಳುತ್ತೇವೆ. ಆದರೆ, ಆತ ಮಾಡಿದ‌ ಕ್ರಾಂತಿ ಏನಾಯಿತು ಎಂದು ನೋಡಬೇಕು ಎಂದರು.

ಇನ್ನೊಬ್ಬರು ರಿಫಾರ್ಮರ್ಸ್ ಇದರಲ್ಲಿ ಬುದ್ದ, ಬಸವ, ಮಹಾವೀರ ಅವರು ಕಾಲ ಮೀರಿ ಬದುಕುತ್ತಾರೆ. ಅಂತಹ ಶ್ರೇಷ್ಠ ವ್ಯಕ್ತತ್ವ ಹೊಂದಿರುವ ಇತಿಹಾಸಕ್ಕೆ ನಾವು ಸೇರಿದ್ದೇವೆ. ಅದರ ಅರಿವಿಲ್ಲದೆ ನಾವು ತಾತ್ಕಾಲಿಕ ಲೋಕದಲ್ಲಿದ್ದರೆ ನಮಗೆ ಮೂಲ ಆಳದ ಬಗ್ಗೆ ಅರಿವು ಇರುವುದಿಲ್ಲ ಎಂದರು.

ಒಂದು ಬಾವಿ ಪಕ್ಕದಲ್ಲಿ ಹಳ್ಳ ಇತ್ತು. ಅದು ಬಾವಿಗೆ‌ ನೀನು ನಿಂತಲ್ಲೆ ನಿಂತಿದ್ದೀಯಾ, ನಾನು ಹರಿದು ಎಲ್ಲರಿಗೂ ನೀರು ಕೊಡುತ್ತೇನೆ ನಾನೇ ಶ್ರೇಷ್ಠ ಎಂದು ಹೆಳುತ್ತದೆ. ಅದಕ್ಕೆ ಬಾವಿ ನಾನು ಆಳವಾಗಿ ಒಂದೇ ಕಡೆ ಇದ್ದು ಜನರ ಸಂಕಷ್ಟಕ್ಕೆ ಆಗುತ್ತೇನೆ ಎಂದು ಹೇಳುತ್ತದೆ. ಅದೆ ರೀತಿ ವಚನ ಸಾಹಿತ್ಯ, ಯಾವುದೇ ವೇದ ಪುರಾಣಕ್ಕೂ ಕಡಿಮೆ ಇಲ್ಲದ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಇದೆ ಎಂದರು.

ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಅಂತ ಒಂದೆ ಪದದಲ್ಲಿ ಹೇಳಿದ್ದಾರೆ. ಆದರೆ, ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವ ಶಕ್ತಿಗಳು ಹುಟ್ಟಿಕೊಂಡಿವೆ. ಇಷ್ಟೆಲ್ಲ ನಮ್ಮ ಸುತ್ತಲೂ ನಡೆಯುತ್ತಿದ್ದರೂ ನಾವು ಏನೂ ಮಾಡಲು ಆಗುತ್ತಿಲ್ಲ ಎಂದು ಅಸಹಾಯಕತೆ ಮೂಡುತ್ತಿದೆ. ಅದು ಮೂಡಬಾರದು.

ಬಸವ ಸಾಹಿತ್ಯ ಓದಬೇಕು, ಅದನ್ನು ಪ್ರಚಾರ ಮಾಡುವ ಮೂಲಕ ಶಾಂತಿ ಸ್ಥಾಪಿಸಬೇಕು. ರೇಣುಕಾಚಾರ್ಯ ಮಾನವ ದರ್ಮಕ್ಕೆ ಜಯವಾಗಲಿ ಎಂದರು. ನಾವು ಮೂಲ ಮರೆತಿದ್ದೇವೆ. ಬಸವಣ್ಣನನ್ನು ಹಿಡಿದುಕೊಂಡರೆ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಯಾವಾಗ ಬಸವ ಜಯಂತಿ ನಾಡಿನ ಪ್ರತಿಯೊಂದು ಹರಿಜನಕೇರಿಯಲ್ಲಿ ಆಗುತ್ತದೊ ಆಗ ರಾಜ್ಯ ಉದ್ದಾರವಾಗುತ್ತದೆ. ಈ ಜಗತ್ತಿನ ಮೂಲಭೂತ ಬದಲಾವಣೆ ಮಾಡಿರುವುದು ಸರ್ಕಾರಗಳು, ದೊಡ್ಡ ಶಕ್ತಿಗಳಲ್ಲಾ, ವ್ಯಕ್ರಿಗಳು, ಐನ್ ಸ್ಟಿನ್, ಬುದ್ದ, ಮಹಮದ್ ಪೈಗಂಬರ್, ಬಸವಣ್ಣ. ಎಲ್ಲರೂ ದೊಡ್ಡ ವ್ಯಕ್ತಿಗಳು. ಬದುಕಿನಲ್ಲಿ ಕೇವಲ ತ್ಯಾಗ‌ಮಾಡಿದರೆ ಸಾಲದು ನಿಮ್ಮ ಮನದಾಳದ ಮಾತು ಹಂಚಿಕೊಂಡಾಗ ಮಾತ್ರ ಸಾಕ್ಷಾತ್ಕಾರ ಬರುತ್ತದೆ.

ಸ್ವಾಮಿ ವಿವೇಕಾನಂದರು ತಮಗೆ ಜ್ಞಾನೋದಯ ಆಗಿದೆ ಎಂದು ಹೇಳಿದಾಗ ಅವರಿಗೆ ರಾಮಕೃಷ್ಣ ಪರಮಹಂಸರು ನಿನ್ನ ಜ್ಞಾನ ಜಗತ್ತಿಗೆ ತಿಳಿದಾಗ ನಿನಗೆ‌ ಜ್ಞಾನೋದಯ ಆಗುತ್ತದೆ ಎಂದು ಹೇಳಿದ್ದರು. ಅವರ ಮಾತಿನಂತೆ ವಿವೇಕಾನಂದರು ನಡೆದುಕೊಂಡು ಜ್ಞಾನ ಹಂಚಿದರು ಎಂದು ಹೇಳಿದರು.

ನಾಡೋಜ ಗೋ.ರು.ಚನ್ನಬಸಪ್ಪ ಅವರ ಸಾಹಿತ್ಯ ದೊಡ್ಡ ಆಸ್ತಿ, ಅವರ ಜ್ಞಾನ, ಶಕ್ತಿಯನ್ನು ಬಳಸಿಕೊಳ್ಳಬೇಕು ಎಂದರು.

ಉಜ್ವಲ ಭವಿಷ್ಯ

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಗೆ ಉಜ್ವಲ ಭವಿಷ್ಯ ಇದೆ. ಅವರ ಭವಿಷ್ಯದೊಂದಿಗೆ ರಾಜ್ಯದ ಉಜ್ವಲ ಭವಿಷ್ಯ ಸೇರಬೇಕು. ನೀವು ಫ.ಗು.ಹಳಕಟ್ಟಿ ಅವರ ಸೇವೆ ಮಾಡುತ್ತಿದ್ದೀರಾ. ಒಬ್ಬ ರಾಜಕಾರಣಿ ಮುಂದಿನ ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ, ಆದರೆ, ಒಬ್ಬ ಮುತ್ಸದ್ದಿ ಮುಂದಿನ ಜನಾಂಗದ ಬಗ್ಗೆ ಯೋಚನೆ ಮಾಡುತ್ತಾನೆ. ನೀವು ಮುತ್ಸದ್ದಿಗಳಾಗಿ ಮುಂದಿನ ಜನಾಂಗಕ್ಕೆ ಅನುಕೂಲ ಮಾಡುತ್ತಿದ್ದೀರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಬಸವ ವೇದಿಕೆ ಅಧ್ಯಕ್ಷ ಡಾ. ಸಿ. ಸೋಮಶೇಖರ, ಉಪಾಧ್ಯಕ್ಷ ಷಡಕ್ಷರಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ ಅವರಿಗೆ ಬಸವಶ್ರೀ ಪ್ರಶಸ್ತಿ, ಎಂ.ಡಿ. ಪಲ್ಲವಿ ಹಾಗೂ ಬಿಎಲ್ ಡಿಇ ಸಂಸ್ಥೆಯ ವಚನ ಪಿತಾಮಹ ಫ.ಗು ಹಳಕಟ್ಟಿ ಸಂಶೋಧನಾ ಸಂಸ್ಥೆಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜಕೀಯ

ರಾಜ್ಯ ಸರ್ಕಾರದ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿ ಟೀಕೆ

ರಾಜ್ಯ ಸರ್ಕಾರದ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿ ಟೀಕೆ

ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2025-26ನೇ ಸಾಲಿನ ಬಜೆಟ್‌ನಲ್ಲಿ ಯಾರನ್ನೂ ಓಲೈಕೆ ಮಾಡದೇ ಎಲ್ಲಾ ವರ್ಗದವರ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಬಜೆಟ್ ಮಂಡನೆ ಮಾಡಲಾಗಿದೆ. ಕಾಂಗ್ರೆಸ್ ಬಜೆಟ್ ಮಾಡಿದ್ದರೆ ತಾರತಮ್ಯ ಹಾಗೂ

[ccc_my_favorite_select_button post_id="119201"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

RCB: ಮತ್ತೆ ಕಪ್ ನಮ್ದು

RCB: ಮತ್ತೆ ಕಪ್ ನಮ್ದು

4ನೇ ಆವೃತ್ತಿಯ ಮಹಿಳಾ ಪ್ರೀಮಿ ಯರ್ ಲೀಗ್ (ಡಬ್ಲ್ಯೂಪಿ ಎಲ್) ಟೂರ್ನಿಯಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಸಿಎಂ ಸಿದ್ದರಾಮಯ್ಯ (Cmsiddaramaiah), ಡಿಸಿಎಂ

[ccc_my_favorite_select_button post_id="119174"]
ದೊಡ್ಡಬಳ್ಳಾಪುರ: ಹುಲ್ಲಿನ ಬಣವೆಗೆ ಬೆಂಕಿ..  ರೈತರಿಗೆ ಅಪಾರ ನಷ್ಟ

ದೊಡ್ಡಬಳ್ಳಾಪುರ: ಹುಲ್ಲಿನ ಬಣವೆಗೆ ಬೆಂಕಿ.. ರೈತರಿಗೆ ಅಪಾರ ನಷ್ಟ

ಸಹೋದರರು ಒಂದೇ ಕಡೆ ಹಾಕಿದ್ದ ಬಣವೆಗೆ (Haystack) ಆಕಸ್ಮಿಕವಾಗಿ ಬೆಂಕಿ (Fire) ತಗುಲಿ, ಹುಲ್ಲು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ತಾಲೂಕಿನ ***** ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

[ccc_my_favorite_select_button post_id="119190"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!