ನವದೆಹಲಿ: ಅಮರನಾಥ ಯಾತ್ರೆಗೆ (Amarnath Yatra) ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಅಮರನಾಥ ಯಾತ್ರೆ 2025ರ ಮೊದಲ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಅಮರನಾಥ ಯಾತ್ರೆ ಜುಲೈ 3 ರಿಂದ ಆರಂಭವಾಗಲಿದ್ದು ಆಗಸ್ಟ್ 09 ವರೆಗೆ ನಡೆಯಲಿದೆ.
ಇದೀಗ ಎರಡು ತಿಂಗಳ ಮೊದಲೇ ಅಮರನಾಥ ಶಿವಲಿಂಗದ ಮೊದಲ ಫೋಟೋ ಬಿಡುಗಡೆ ಮಾಡಲಾಗಿದೆ. ಪಂಜಾಬ್‌ನಿಂದ ಬಂದಿರುವ ಈ ಭಕ್ತರು ಅಮರನಾಥ ಗುಹೆಯನ್ನು ತಲುಪಿದ ಮೊದಲ ತಂಡವಾಗಿದೆ.
ಈ ವರ್ಷದಲ್ಲಿ ಇಲ್ಲಿಯವರೆಗೆ ಶ್ರೀ ಅಮರನಾಥ ದೇಗುಲ ಮಂಡಳಿಯ ಯಾವುದೇ ಅಧಿಕಾರಿಗಳು ಅಥವಾ ಭದ್ರತಾ ಸಿಬ್ಬಂದಿ ಗುಹೆಯನ್ನು ತಲುಪಿಲ್ಲ ಎಂದು ವರದಿಯಾಗಿದೆ.
ಯಾತ್ರೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಹಿಮದಿಂದ ಆವೃತವಾದ ಹಾದಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ.
ಪಹಲ್ಲಾಮ್ ನಲ್ಲಿ ನಡೆದ ದಾಳಿಯ ಬಳಿಕವು ಸಾಕಷ್ಟು ಭಕ್ತರು ದೇವರ ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದು ಅಮರನಾಥ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಹಲವಾರು ಮಾರ್ಗ ಸೂಚಿಗಳನ್ನು ಕೈಗೊಳ್ಳಲಾಗಿದೆ.
ಇಲ್ಲಿಯವರೆಗೆ 360,000 ಕ್ಕೂ ಹೆಚ್ಚು ಯಾತ್ರಿಕರು ಈಗಾಗಲೇ ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.