ದೊಡ್ಡಬಳ್ಳಾಪುರ; ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಎಂ.ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ (MSV Public School) “ಆಪರೇಷನ್ ಸಿಂಧೂರ್” (Operation Sindoor) ವಿಜಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ರೆಮ್ಯ ಬಿ.ವಿ. ಮಾತನಾಡಿ, ದೇಶದ ಯೋಧರು ಉಗ್ರರ ಮೇಲೆ ದಾಳಿ ಮಾಡಿ ದೇಶದ ಘನತೆಗೆ ಕೀರ್ತಿ ತಂದ ಬಗ್ಗೆ ಹಾಗೂ ಪಹಲ್ಗಾಮ್ ದಾಳಿಯಲ್ಲಿ ಬಲಿಯಾದ ಅಮಾಯಕ ಮುಗ್ಧ ಜೀವಗಳ ಸಾವಿಗೆ ನ್ಯಾಯ ದೊರೆತ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿದರು.
ಶಾಲೆಯ ಸಮಾಜ ಶಾಸ್ತ್ರ ಶಿಕ್ಷಕ ವಿಲ್ಸನ್ ಅವರು, ಭಾರತದ ವೇದ ಪುರಾಣಗಳ ಬಗ್ಗೆ, ಅವುಗಳಲ್ಲಿರುವ ಶಾಂತಿಯ ಸಂದೇಶದ ಬಗ್ಗೆ ತಿಳಿಸಿದರು.
ಸಮಾಜ ಶಾಸ್ತ್ರದ ಮತ್ತೋರ್ವ ಶಿಕ್ಷಕರಾದ ದಿನಕರ್ ರವರು ಆಪರೇಷನ್ ಸಿಂಧೂರದ ವಿಜಯದ ಬಗ್ಗೆ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.

ಕನ್ನಡ ಭಾಷಾ ಶಿಕ್ಷಕ ರಮೇಶ್ ಪೂಜಾರಿ ಮಾತನಾಡಿ, ಜಗತ್ತಿನಲ್ಲಿ ಭಾರತ ಶಾಂತಿಪ್ರಿಯ ರಾಷ್ಟ್ರ. ಅದಕ್ಕೆ ತನ್ನದೇ ಆದ ಸ್ಥಾನ ಮಾನವಿದೆ. ಭಾರತ ಈಗ ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಯೋತ್ಪಾದನೆಯನ್ನು ಎದುರಿಸುವಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ ಎಂಬ ಅಂಶವನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕರಾದ ಸ್ವರೂಪ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.