ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ಪ್ರತಿಕಾರದ ದಾಳಿ ಆಪರೇಷನ್ ಸಿಂಧೂರ್‌ಗೆ (OperationSindoor) ಪಾಕಿಸ್ತಾನ ತತ್ತರಿಸಿದೆ.
9 ಪ್ರತ್ಯೇಕ ಉಗ್ರಾಮಿಗಳ ತಾಣಗಳ ಮೇಲೆ ನಡೆದ ದಾಳಿಯಲ್ಲಿ 70 ಕ್ಕೂ ಹೆಚ್ಚು ಉಗ್ರರು ಸಾವನಪ್ಪಿದ್ದಾರೆ ಎನ್ನಲಾಗುತ್ತಿದ್ದರೆ, ಪಾಕಿಸ್ತಾನ ಮಾತ್ರ 8 ಮಂದಿ ಸಾವನಪ್ಪಿದ್ದಾರೆ ಎಂದಿದೆ.
ಈ ಕುರಿತಂತೆ 10.30ಕ್ಕೆ ಭಾರತ ಸರ್ಕಾರದ ಕಡೆಯಿಂದ ಸೇನಾ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸಲಿದ್ದು, ಕಾರ್ಯಾಚರಣೆಯ ಕುರಿತು ಸಂಪೂರ್ಣ ಮಾಹಿತಿ ತಿಳಿದು ಬರಲಿದೆ.
ಇನ್ನೂ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ಪ್ರತಿಕಾರದ ದಾಳಿಯನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shiva Kumar) ಸ್ವಾಗತಿಸಿದ್ದಾರೆ.
ರಾಹುಲ್ ಗಾಂಧಿ ಟ್ವಟ್ ಮಾಡಿ, ನಮ್ಮ ಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್ ಎಂದು ಬರೆದಿದ್ದಾರೆ.
Proud of our Armed Forces. Jai Hind!
— Rahul Gandhi (@RahulGandhi) May 7, 2025
ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವಿಟ್ ಮಾಡಿ, ಪಹಲ್ಗಾಮ್ ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ್ ಸೂಕ್ತ ಪ್ರತ್ಯುತ್ತರ ಎಂದಿದ್ದಾರೆ.
#OperationSindoor is a befitting reply to the cowardly Pahalgam terror attack.
— DK Shivakumar (@DKShivakumar) May 7, 2025
We stand with the govt, we stand with our security forces.
Jai Hind.🇮🇳 pic.twitter.com/55vsj1rpbE
ಅಲ್ಲದೆ ನಾವು ಸರ್ಕಾರದೊಂದಿಗೆ ನಿಲ್ಲುತ್ತೇವೆ, ನಮ್ಮ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆ ಜೈ ಹಿಂದ್ ಎಂದಿದ್ದಾರೆ.